ಮುಲ್ಕಿ ಸರ್ಟಿಫಿಕೇಟ್ ಕೋರ್ಸು ಓನ್ ಟ್ಯಾಕ್ಸೇಶನ್

Photo by Bhagyavan Sanil

ಮುಲ್ಕಿ: ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸಿಕೊಡುವ ಉದ್ದೇಶದಿಂದ ಮುಲ್ಕಿಯ ವಿಜಯ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸು ಓನ್ ಟ್ಯಾಕ್ಸೇಶನ್ ಕೋರ್ಸನ್ನು ಉದ್ಘಾಟಿಸಲಾಯಿತು.  ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಸದಾಶಿವ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಆರ್.ಶಂಕರ್ ಪ್ರಾಸ್ತಾವಿಕವಾಗಿ ಕೋರ್ಸಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ನಾರಾಯಣ್ ಉಪಸ್ಥಿತರಿದ್ದರು.    ವಿದ್ಯಾರ್ಥಿ ರಾಕೇಶ್ ಪ್ರಾರ್ಥಿಸಿದರು.  ಅಧ್ಯಾಪಕರಾದ ಶರ್ಮಿಳಾ ರಾಜೇಶ್ ಸ್ವಾಗತಿಸಿದರು.  ಆಕಾಶ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.  ವಾಣಿಜ್ಯಶಾಸ್ತ್ರದ ಉಪನ್ಯಾಸಕಿ ಜಯಶ್ರೀ ವಂದನಾರ್ಪಣೆಗೈದರು.  ವಿದ್ಯಾರ್ಥಿ ನಾಯಕ ಅಮಿತ್ ಪೈ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಮುಲ್ಕಿಯಲ್ಲಿ ತುಳು ಚಲನಚಿತ್ರ ಪದರ್ಶನ ಮಾಲಿಕೆ ಸಂವಾದ

Photo by Bhagyavan Mulki ಮುಲ್ಕಿ : ರಂಗ ಭೂಮಿಯ ಪ್ರೇರಣೆ ಮತ್ತು ಕಲಾವಿದರ ಸೃಜನಶೀಲತೆ ತುಳು ಚಲನ ಚಿತ್ರಗಳು ಜನಮಾನಸ ಗೆಲ್ಲಲು ಸಹಕಾರಿಯಾಯಿತು ಎಂದು ರಂಗಕರ್ಮಿ ತಮ್ಮ...

Close