ಮಂಗಳೂರು ದೇಶದ ಪ್ರಥಮ ತ್ರಿ-ಡಿ ತಾರಾಲಯ

News by Harsha Kinnigoli


ಇನ್ನು ಕೇವಲ 18 ತಿಂಗಳಲ್ಲಿ ಮಂಗಳೂರು ದೇಶದ ಪ್ರಥಮ ತ್ರಿ-ಡಿ ತಾರಾಲಯ ಹೊಂದಿದ ನಗರವಾಗಲಿದೆ. ಸುಮಾರು 24.50ಕೋಟಿ ರೂ. ವೆಚ್ಚದಲ್ಲಿ ಪ್ರತಿಷ್ಠಿತ 3-ಡಿ ತಾರಾಲಯವು ಮಂಗಳೂರಿನ ಪಿಲಿಕುಲದಲ್ಲಿ ನಿರ್ಮಾಣಗೊಳ್ಳಲಿದೆ. ಹಾಗೆಯೇ ಬಾಹ್ಯಾಕಾಶದ ಬಗ್ಗೆ ಸಮಗ್ರ ಮಾಹಿತಿಯನ್ನೊದಗಿಸುವ ತಾರಾಲಯದ ಕನಸು ನನಸಾಗುವ ದಿನ ಹತ್ತಿರದಲ್ಲಿದೆ. ಆ ಮೂಲಕ ಮಂಗಳೂರು ದೇಶದ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡು ಗಮನಸೆಳಯಲಿದೆ. ಪಿಲಿಕುಲದಲ್ಲಿ 5 ಎಕರೆ ಸ್ಥಳವನ್ನು ಇದಕ್ಕಾಗಿ ಗುರುತಿಸಲಾಗಿದೆ.
ಉದ್ದೇಶಿತ ತಾರಾಲಯ ಗೊಮ್ಮಟಾಕೃತಿಯಲ್ಲಿದ್ದು ಅದರ ವ್ಯಾಸ 18 ಮೀಟರ್ ಅಗಲವಿದೆ. ಇಂತಹ ಆಧುನಿಕ ತಂತ್ರಜ್ಞಾನದ ತಾರಾಲಯ ಶಿಕಾಗೋ, ಹಾಂಕಾಂಗ್ ಮತ್ತು ಮೆಕಾವೆಗಳಲ್ಲಿದೆ. ದೊಡ್ಡ ಗೋಲಾಕಾರದಲ್ಲಿ ಸೂರ್ಯ, ಚಂದ್ರ, ಭೂಮಿ, ಆಕಾಶಕಾಯ, ನಕ್ಷತ್ರಗಳ ಭೂತ, ವರ್ತಮಾನ, ಭವಿಷ್ಯತ್‌ಗಳ ವಿವರಣೆ ಮತ್ತು ಅವುಗಳ ಚಲನೆ 3-ಡಿ ತಂತ್ರಜ್ಞಾನದ ಮೂಲಕ ಮೂಡಿ ಬರಲಿದೆ. ಪಿಲಿಕುಲದಲ್ಲಿ ತಾರಾಲಯದೊಂದಿಗೆ ವಿಜ್ಞಾನಕ್ಕೆ ಸಂಬಂಸಿದ ಪ್ರಯೋಗಗಳನ್ನು ನಡೆಸುವ, ಬಾಹ್ಯಾಕಾಶಕ್ಕೆ ಸಂಬಂಸಿದಂತೆ ಮಾಹಿತಿಯನ್ನೊದಗಿಸುವ ಕೇಂದ್ರ ನಿರ್ಮಾಣವಾಗುವ ಯೋಜನೆಯಿದೆ.

Comments

comments

Leave a Reply

Read previous post:
ಕಟೀಲಿನಲ್ಲಿ ಪ್ರಾಥಮಿಕ ಶಾಲಾ ಪಂದ್ಯಾಟ

ಕಟೀಲು: ಪದ್ಮನೂರು ಕ್ಲಸ್ಟರ್, ಮುಲ್ಕಿ ಬಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಪಂದ್ಯಾಟ ಶುಕ್ರವಾರ ಕಟೀಲು ದೇವಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಪದ್ಮನೂರು ಶಾಲೆಯ...

Close