ಕಟೀಲಿನಲ್ಲಿ ಪ್ರಾಥಮಿಕ ಶಾಲಾ ಪಂದ್ಯಾಟ

ಕಟೀಲು: ಪದ್ಮನೂರು ಕ್ಲಸ್ಟರ್, ಮುಲ್ಕಿ ಬಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಪಂದ್ಯಾಟ ಶುಕ್ರವಾರ ಕಟೀಲು ದೇವಳ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಪದ್ಮನೂರು ಶಾಲೆಯ ಸಂಯೋಜನೆಯಲ್ಲಿ ನಡೆದ ಈ ಪಂದ್ಯಾಟವನ್ನು ಶಾಸಕ ಅಭಯಚಂದ್ರ ಜೈನ್ ಉದ್ಘಾಟಿಸಿದರು. ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಆಶೀರ್ವಚನ ನೀಡಿದರು. ತಾ.ಪಂ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಪಂಚಾಯತ್ ಸದಸ್ಯ ಹರೀಶ್ಚಂದ್ರ ರಾವ್, ಶಾಲಾ ಸಮಿತಿಯ ವಿಶ್ವನಾಥ್ ಶೆಟ್ಟಿ, ಶೇಖರ ಪೂಜಾರಿ, ಜ್ಯೋತಿ ಡಿ.ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಎನ್.ಎಸ್.ಅಂಗಡಿ, ಪದ್ಮನೂರು ಸಿ.ಆರ್.ಪಿ, ಜಗದೀಶ್ ನಾವಡ, ಮೆನ್ನಬೆಟ್ಟು ಪಂಚಾಯತ್‌ನ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು, ಕಟೀಲು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಉಪಸ್ಥಿತರಿದ್ದರು. ಪದ್ಮನೂರಿನ ಮುಖ್ಯ ಶಿಕ್ಷಕಿ ಗಿರಿಜಾ ಸ್ವಾಗತಿಸಿ, ವಸಂತಿ ವಂದಿಸಿದರು, ಕಟೀಲಿನ ಪ್ರಾಥಮಿಕ ಶಾಲಾ ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸಂಕಲರಿಯ, ಕಿಲೆಂಜೂರು ಮತ್ತು ಶಿಬರೂರು ನೆರೆ

ಸಂಕಲರಿಯ ಕಿಲೆಂಜೂರು ಶಿಬರೂರು  

Close