ಪಂಜ ಕೊಕುಡೆಯಲ್ಲಿ ನೆರೆ ನಂದಿನಿ ತಡೆಗೋಡೆ ಕುಸಿತ

ಕಿನ್ನಿಗೋಳಿ: ಶನಿವಾರ ಪಂಜ ಕೊಕುಡೆಯಲ್ಲಿ ನಂದಿನಿ ತಡೆಗೋಡೆ ಕುಸಿದು ಸುಮಾರು 250 ಎಕರೆ ಕೃಷಿ ಭೂಮಿ ಜಲಾವೃತ ಗೊಂಡಿದೆ. ಪಂಜ ಉಲ್ಯದಲ್ಲಿ ನಂದಿನೀ ನದಿಯ ತಡೆಗೋಡೆ ಕುಸಿದು ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳು ಜಲಾವೃತ ಗೊಂಡು ಸುಮಾರು 80 ಮನೆಗಳ ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬೈಲಗುತ್ತು ಸತೀಶ್ ಶೆಟ್ಟಿಯವರು ತಮ್ಮ ಸ್ವಂತ ದೋಣಿಯಲ್ಲಿ ಪಂಚಾಯತ್ ಸದಸ್ಯ ಸುರೇಶ್ ದೇವಾಡಿಗ ಮತ್ತಿತರರ ಸಹಕಾರದೊಂದಿಗೆ ಜನರನ್ನು ಸ್ಥಳಾಂತರಿಸುದಕ್ಕೆ ಸಹಕರಿಸಿದರು. ತಹಸೀಲ್ದಾರ್ ರವಿಚಂದ್ರ ನಾಯಕ್, ಮುಲ್ಕಿ ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಗ್ರಾಮಕರಣಿಕ ಲೊಕೇಶ್, ಮತ್ತಿತರರು ಸ್ಥಳದಲ್ಲಿದ್ದು ಮುಲ್ಕಿ ಪೊಲೀಸರು, ಗೃಹ ರಕಕ್ಷಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Comments

comments

Leave a Reply

Read previous post:
ಮಂಗಳೂರು ದೇಶದ ಪ್ರಥಮ ತ್ರಿ-ಡಿ ತಾರಾಲಯ

News by Harsha Kinnigoli ಇನ್ನು ಕೇವಲ 18 ತಿಂಗಳಲ್ಲಿ ಮಂಗಳೂರು ದೇಶದ ಪ್ರಥಮ ತ್ರಿ-ಡಿ ತಾರಾಲಯ ಹೊಂದಿದ ನಗರವಾಗಲಿದೆ. ಸುಮಾರು 24.50ಕೋಟಿ ರೂ. ವೆಚ್ಚದಲ್ಲಿ ಪ್ರತಿಷ್ಠಿತ...

Close