ಯಕ್ಷಲಹರಿ ಸರಣಿ ತಾಳಮದ್ದಲೆ “ಭಕ್ತಿರೇವಗರೀಯಸೀ” ಉದ್ಘಾಟನೆ.

Photo by Sharath Kinnigoli

ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಸಂಸ್ಥೆಯ ಇಪ್ಪತ್ತೆರಡನೆಯ ವಾರ್ಷಿಕೋತ್ಸವದ ಅಂಗವಾಗಿ ಯುಗಪುರುಷ ಸಂಸ್ಥೆಯ ಸಹಯೋಗದೊಂದಿಗೆ ಎಂಟುದಿನಗಳ ಅಪೂರ್ವ- ಶಿಸ್ತು ಬದ್ಧ ಕಾಲಮಿತಿ ಸಂಯೋಜನೆಯ ಸರಣಿ ತಾಳಮದ್ದಲೆ “ಯಕ್ಷಾಷ್ಟಕ” ವನ್ನು ವೇ| ಮೂ| ಕೊಲೆಕ್ಕಾಡಿ ವಾದಿರಾಜ ಉಪಾಧ್ಯಾಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಟೀಲಿನ ಲಕ್ಷೀನಾರಾಯಣ ಆಸ್ರಣ್ಣ ಆಶೀರ್ವಚನದಲ್ಲಿ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆ ವಹಿಸಿದ್ದು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಿಂಡಿಕೇಟ್ ಬ್ಯಾಂಕ್ ಪ್ರಬಂದಕ ಮಂಜುನಾಥ ಮಲ್ಯ, ಕೆನರಾ ಬ್ಯಾಂಕ್ ಪ್ರಬಂಧಕ ಪದ್ಮನಾಭ ಶೆಟ್ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಬಂಧಕ ಕೇಶವ್, ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿ ರಾಮ, ಕರ್ನಾಟಕ ಬ್ಯಾಂಕ್ ಪ್ರಬಂಧಕ ಸದಾನಂದ ಎಸ್, ದೇನಾ ಬ್ಯಾಂಕ್ ಪ್ರಬಂಧಕ ಕೃಷ್ಣ ಮೂರ್ತಿ, ಇಂಡಿಯಾನ್ ಓವರ್ ಸೀಸ್ ಬ್ಯಾಂಕ್ ಪ್ರಬಂಧಕ ಬಿ.ಕೆ.ಕುಮಾರ್, ರತ್ನ ಎಸ್ ಕೋಟ್ಯಾನ್, ಪಿ ಸತೀಶ್ ರಾವ್ ಉಪಸ್ಥಿತರಿದ್ದರು.
ಯಕ್ಷಲಹರಿಯ ಅಧ್ಯಕ್ಷ ಲ|. ಇ ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಕಾರ್ಯದರ್ಶಿ ಶ್ರೀಧರ ಡಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ-ಮಲೆನಾಡ ಪ್ರಾಂತ್ಯದ ನೂರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ.

Comments

comments

Leave a Reply

Read previous post:
ಪಂಜ ಕೊಕುಡೆಯಲ್ಲಿ ನೆರೆ ನಂದಿನಿ ತಡೆಗೋಡೆ ಕುಸಿತ

ಕಿನ್ನಿಗೋಳಿ: ಶನಿವಾರ ಪಂಜ ಕೊಕುಡೆಯಲ್ಲಿ ನಂದಿನಿ ತಡೆಗೋಡೆ ಕುಸಿದು ಸುಮಾರು 250 ಎಕರೆ ಕೃಷಿ ಭೂಮಿ ಜಲಾವೃತ ಗೊಂಡಿದೆ. ಪಂಜ ಉಲ್ಯದಲ್ಲಿ ನಂದಿನೀ ನದಿಯ ತಡೆಗೋಡೆ ಕುಸಿದು...

Close