ಕಿನ್ನಿಗೋಳಿ ಚರ್ಚಿನಲ್ಲ್ಲಿ ಸಮುದಾಯ ದಿನಾಚರಣೆ

Photo by Lionel Pinto

ಕಿನ್ನಿಗೋಳಿ: ಕಿನ್ನಿಗೋಳಿ ಚರ್ಚಿನಲ್ಲಿ ಸಮುದಾಯದ ದಿನವನ್ನು ರವಿವಾರ ಆಚರಿಸಲಾಯಿತು. ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಮುಖ್ಯಸ್ಥರಾದ ಫಾ| ಜೊಸೆಫ್ ಮಾರ್ಟಿನ್‌ರವರು ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಉದ್ದಿಮೆ ನಡೆಸುತ್ತಿರುವ ಕಿನ್ನಿಗೋಳಿಯ ಉದ್ಯಮಿ ಜೇಕಬ್ ಕ್ರಾಸ್ತಾರವರನ್ನು ಸನ್ಮಾನಿಸಲಾಯಿತು. ಕಿನ್ನಿಗೋಳಿ ಚರ್ಚಿನ ಧರ್ಮಗುರು ಫಾ| ಆಲ್ಫ್ರೆಡ್ ಪಿಂಟೋ, ಸಹಾಯಕ ಧರ್ಮಗುರು ಫಾ| ವಿನೋದ್ ಲೋಬೊ, ಮೇರಿವೆಲ್ ಕಾನ್ವೆಂಟಿನ ಭಗಿನಿ ಡಿವಿನಾ, ಶಾಂತಿ ಸದನ ಕಾನ್ವೆಂಟಿನ ಭಗಿನಿ ಪ್ರೆಸಿಲ್ಲಾ, ಚರ್ಚಿನ ಉಪಾಧ್ಯಕ್ಷ ಲೈನಲ್ ಪಿಂಟೋ, ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ, ಮೈಕಲ್ ಪಿಂಟೋ, ಹೆರಿಕ್ ಪಾಯ್ಸ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಅಮ್ಚೆಂ ಮಂಗ್ಳುರ್

Close