ಮೆನ್ನಬೆಟ್ಟುವಿನಲ್ಲಿ ಮನೆ ಕುಸಿತ

ಕಿನ್ನಿಗೋಳಿ : ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಚೆನ್ನಪ್ಪ ಎಂಬವರ ಮನೆ ರವಿವಾರ ಬೆಳಿಗ್ಗೆ ಬಾರೀ ಮಳೆಗೆ ಛಾವಣಿ, ಗೋಡೆ ಕುಸಿದು ಪಾತ್ರೆಗಳು, ಬಟ್ಟೆ ಬರೆ ಮಕ್ಕಳ ಶಾಲಾ ಪುಸ್ತಕಗಳು ಹಾನಿಗೀಡಾಗಿವೆ. ಮನೆಯೋಳಗೆ ಮಲಗಿದ್ದವರಲ್ಲಿ ಚೆನ್ನಪ್ಪ ಗಾಯಗೊಂಡಿದ್ದಾರೆ. ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು, ಪಿಡಿಒ ಗಣೇಶ ಬಡಿಗೇರ, ಗ್ರಾಮಕರಣಿಕ ಮಂಜುನಾಥ, ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಸಿಮೆಂಟ್ ಶೀಟ್ ಹಾಸಲಾಗುವುದು ಬಳಿಕ ಸರಕಾರದ ಯೋಜನೆಯಡಿಯಲ್ಲಿ ಸಹಾಯ ಕಲ್ಪಿಸುವುದಾಗಿ ತಿಳಿಸಿದ್ದಾರೆ.

 

Comments

comments

Leave a Reply

Read previous post:
ಕಿನ್ನಿಗೋಳಿ ಚರ್ಚಿನಲ್ಲ್ಲಿ ಸಮುದಾಯ ದಿನಾಚರಣೆ

Photo by Lionel Pinto ಕಿನ್ನಿಗೋಳಿ: ಕಿನ್ನಿಗೋಳಿ ಚರ್ಚಿನಲ್ಲಿ ಸಮುದಾಯದ ದಿನವನ್ನು ರವಿವಾರ ಆಚರಿಸಲಾಯಿತು. ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಮುಖ್ಯಸ್ಥರಾದ ಫಾ| ಜೊಸೆಫ್ ಮಾರ್ಟಿನ್‌ರವರು ಮುಖ್ಯ...

Close