ಎಸ್.ಕೆ.ಪಿ.ಎ. ಮುಲ್ಕಿ ವಲಯದ ವಾರ್ಷಿಕ ಮಹಾಸಭೆ

Photos by Lional Pinto

ಮುಲ್ಕಿ : ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರು ತಮ್ಮನ್ನು ಆಧುನಿಕತೆಯತ್ತ ತೊಡಗಿಸಿಕೊಂಡಲ್ಲಿ ಮಾತ್ರ ಉನ್ನತಿ ಗಳಿಸುವಿಕೆ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಶನಿವಾರ ಮೂಲ್ಕಿ ಆಧಿಧನ್ ಸಭಾಂಗಣದಲ್ಲಿ ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಶನ್ ಮುಲ್ಕಿ ವಲಯದ 9 ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಛಾಯಾಗ್ರಾಹಕರು ವೃತ್ತಿಯಲ್ಲಿ ಮತ್ತು ಜೀವನದಲ್ಲಿ ಸಾಧಿಸಲು ಸಂಘಟಿತರಾಗಿರುವುದು ಮಾತ್ರವಲ್ಲದೆ ಸಮಾಜಕ್ಕೆ ಪೂರಕವಾಗಿ ಸ್ಪಂದಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ಕೆ.ವಾಸುದೇವ ರಾವ್ ಮಾತನಾಡಿ, ಛಾಯಾಗ್ರಾಹಕರುಸಂಘಟಿತರಾಗಿ ಶೀಘ್ರ ಸ್ಪಂದಿಸುವ ಮನೋಭಾವನೆಯೊಂದಿಗೆ ನೈತಿಕತೆ ಮತ್ತು ಶಿಸ್ತಿಗೆ ಆದ್ಯತೆ ನೀಡಬೇಕು ಎಂದ ಅವರು ಛಾಯಾಗ್ರಾಹಕರ ಉನ್ನತಿಗಾಗಿ ಹತ್ತು ಹಲವು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ಚಿಂಥನೆ ಜಿಲ್ಲಾ ಸಂಸ್ಥೆ ನಡೆಸುತ್ತಿದೆ ಎಂದರು.
ಈ ಸಂದರ್ಭ ಹಿರಿಯ ಛಾಯಾಗ್ರಾಹಕ ರಾಮ ಮೂಲ್ಯರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ವಲಯದ ಅಧ್ಯಕ್ಷ ರಫಾಯಿಲ್ ರೆಬೆಲ್ಲೋ ವಹಿಸಿದ್ದರು. ಎಸ್.ಕೆ.ಪಿ.ಎ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ರೈ ಪುತ್ತೂರು, ಮುಲ್ಕಿ ನಗರ ಪಂಚಾಯತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಮುಲ್ಕಿ ವಲಯದ ಸ್ಥಾಪಕಾಧ್ಯಕ್ಷ ಸೇಸಪ್ಪ ಸಾಲ್ಯಾನ್ ಕಾರ್ಯದರ್ಶಿ ಯಶವಂತ ವೇದಿಕೆಯಲ್ಲಿದ್ದರು.
ರಫಾಯಿಲ್ ರೆಬೆಲ್ಲೋ ಸ್ವಾಗತಿಸಿದರು.ಯೋಗೀಶ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.ಲೈನಲ್ ಪಿಂಟೋ ವಂದಿಸಿದರು.

Comments

comments

Leave a Reply

Read previous post:
ಕಿಲ್ಪಾಡಿ ಗ್ರಾಮ ಪಂಚಾಯತ್‌ನಿಂದ ಜೈವಿಕ ಇಂದನ ಜಾಗೃತಿ

ಮುಲ್ಕಿ : ಭವಿಷ್ಯದಲ್ಲಿ ಮಾನವ ಸಂಪನ್ಮೂಲಕ್ಕೆ ಅತಿ ಅಗತ್ಯವಾದ ಇಂದನದ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಅದಕ್ಕೆ ಪರ್ಯಾಯವಾಗಿ ಜೈವಿಕ ಇಂಧನವನ್ನು ಬಳಸುವ ಬಗ್ಗೆ ಮಾಹಿತಿ...

Close