ಐಕಳದಲ್ಲಿ ಉದ್ಯೋಗ ಖಾತರಿ ಮಾಹಿತಿ ಶಿಬಿರ

ಕಿನ್ನಿಗೋಳಿ: “ಜನ ಶಿಕ್ಷಣ ಟ್ರಸ್ಟ್”, “ಸುಗ್ರಾಮ ಸಂಘ” ಹಾಗೂ ಗ್ರಾಮ ಪಂಚಾಯಿತಿ ಐಕಳ ಸಹಭಾಗಿತ್ವದಲ್ಲಿ ಉದ್ಯೋಗ ಖಾತರಿ ಮಾಹಿತಿ ಶಿಬಿರ ಶನಿವಾರ ಕಿರೆಂ ಚರ್ಚ್ ಮಿನಿ ಹಾಲ್‌ನಲ್ಲಿ ನಡೆಯಿತು. ಉದ್ಯೋಗ ಖಾತರಿಯ ಕೆಲಸಗಳು ಯಾವುವು, ಕಾನೂನು ರೀತಿಯಲ್ಲಿ ಹೇಗೆ ಕೆಲಸ ಮಾಡಬೇಕು, ಹಣವನ್ನು ಹೇಗೆ ವಿನಿಯೋಗಿಸಬಹುದು, ಯಾವುದಾದರೂ ಎಡರು ತೊಡುರುಗಳಿದ್ದರೆ ಪರಿಹಾರ ಹೇಗೆ ಕಂಡು ಕೊಳ್ಳ ಬಹುದೆಂಬುದನ್ನು ಜನರಿಗೆ ಒಂಬುಡ್ಸ್‌ಮನ್‌ನ ಸೀನ ಶೆಟ್ಟಿ ಹಾಗೂ ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಶೆಟ್ಟಿ ಸವಿಸ್ತಾರವಾಗಿ ತಿಳಿಸಿದರು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಲತಾ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೂಸು, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಕೋಟ್ಯಾನ್, ಬಜ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಸುಗ್ರಾಮ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ಸದಸ್ಯೆ ಸೆವ್ರಿನ್ ಲೋಬೋ ಸ್ವಾಗತಿಸಿದರು. ಸುಗ್ರಾಮ ಸಂಘದ ಕಾರ್ಯಕರ್ತೆ ಶುಭ ಧನ್ಯವಾದವಿತ್ತರು.

Comments

comments

Leave a Reply

Read previous post:
ತುಳು ಸಂಸ್ಕೃತಿಯನ್ನು ಉಳಿಸಿ

ಕಿನ್ನಿಗೋಳಿ: ತುಳು ಸಂಸ್ಕೃತಿ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಜಿನರಾಜ್ ಬಂಗೇರ ಆ. ೧೨ ರಂದು ತೋಕೂರು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮಹಿಳಾ...

Close