ಮೆನ್ನಬೆಟ್ಟುವಿನಲ್ಲಿ ಆಟಿಡೊಂಜಿ ದಿನ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ, ಯುಗಪುರುಷ ಸಭಾ ಭವನದಲ್ಲಿ ನಡೆಯಿತು.
ಯುಗಪುರುಷದ ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ವಲಯಾಧ್ಯಕ್ಷೆ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎನ್. ಶೆಟ್ಟಿ ಆಟಿ ತಿಂಗಳ ಔಷಧಯುಕ್ತ ತಿನಸುಗಳು, ಆಟಿಯ ವಿಶೇಷ ಮಹತ್ವಗಳ ಬಗ್ಗೆ ಮಾಹಿತಿ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಟಿ. ಸಂಪತ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಕೇಂದ್ರೀಯ ಒಕ್ಕೂಟದ ಅಧ್ಯಕ್ಷ ಆಲ್ವಿನ್ ಎಫ್. ಡಿಸೋಜ, ವಲಯ ಮೇಲ್ವಿಚಾರಕಿ ಲತಾ ಎಸ್. ಅಮೀನ್, ಮೆನ್ನಬೆಟ್ಟು ಒಕ್ಕೂಟದ ಅಧ್ಯಕ್ಷೆ ನಯನಾ ಶೆಟ್ಟಿ, ಸೇವಾ ನಿರತ ದೇವೇಂದ್ರ ಉಪಸ್ಥಿತರಿದ್ದರು.
ಪದ್ಮಾವತಿ ಪ್ರಸ್ತಾಪನೆಗೈದರು. ಯತೀಶ್ ಸ್ವಾಗತಿಸಿ ಸುರೇಖಾ ವಂದಿಸಿದರು. ಶುಭಲತಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಆಗಸ್ಟ್ 26 ರಂದು ಮೂಲ್ಕಿ ಬಂಟರ ಸಂಘದಿಂದ ಕೆಸರುಗದ್ದೆ ಕ್ರೀಡೋತ್ಸವ.

ಮುಲ್ಕಿ.ಬಂಟರ ಸಂಘ ಮೂಲ್ಕಿ[ರಿ] ಇದರ ನೇತ್ರತ್ವದಲ್ಲಿ ಸಂಘದ ವ್ಯಾಪ್ತಿಯ ಸಮಾಜ ಭಾಂಧವರಿಗಾಗಿ ಯವ ಬಂಟ ಹಾಗೂ ಕ್ರೀಡಾ ವಿಭಾಗದ ಆಶ್ರಯದಲ್ಲಿ ಕೆಸರು ಗದ್ದೆ ಕ್ರೀಡೋತ್ಸವ-2012 ಆಗಸ್ಟ್ 26...

Close