ಆಗಸ್ಟ್ 26 ರಂದು ಮೂಲ್ಕಿ ಬಂಟರ ಸಂಘದಿಂದ ಕೆಸರುಗದ್ದೆ ಕ್ರೀಡೋತ್ಸವ.

ಮುಲ್ಕಿ.ಬಂಟರ ಸಂಘ ಮೂಲ್ಕಿ[ರಿ] ಇದರ ನೇತ್ರತ್ವದಲ್ಲಿ ಸಂಘದ ವ್ಯಾಪ್ತಿಯ ಸಮಾಜ ಭಾಂಧವರಿಗಾಗಿ ಯವ ಬಂಟ ಹಾಗೂ ಕ್ರೀಡಾ ವಿಭಾಗದ ಆಶ್ರಯದಲ್ಲಿ ಕೆಸರು ಗದ್ದೆ ಕ್ರೀಡೋತ್ಸವ-2012 ಆಗಸ್ಟ್ 26 ರ ಬೆಳಿಗ್ಗೆ 9 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೆಶ್ವರೀ ದೇವಳದ ಬಳಿಯ ಕಂಬಳ ಗದ್ದೆಯಲ್ಲಿ ನಡೆಯಲಿದೆ.ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು,ಕೆಸರುಗದ್ದೆ ಓಟ 15 ರ ಹರೆಯದೊಳಗಿನವರಿಗೆ ಹಾಗೂ ನಂತರದವರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯಲಿದೆ. ಹಗ್ಗ ಜಗ್ಗಾಟ ಸ್ಪರ್ಧೆಗಳು ಪುರುಷರಿಗೆ ಮತ್ತು ಮಹಿಳೆಯರಿಗೆ ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಬಹಮಾನಗಳಿದ್ದು,ಆಗಸ್ಟ್ 20 ರ ಒಳಗೆ ಪ್ರತೀ ಗ್ರಾಮದಿಂದ ಕಡ್ಡಾಯವಾಗಿ ಬಂಟ ಬಾಂಧವರು ತಮ್ಮ ತಂಡವನ್ನು ನೋಂದಾಯಿಸಬೇಕಾಗಿದ್ದು,ವಿವರಗಳಿಗಾಗಿ ಆಯಾ ಗ್ರಾಮದ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದಾಗಿದೆಯೆಂದು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ ಕುಮಾರ್ ಹೆಗ್ಡೆ,ಯುವ ವೇದಿಕೆಯ ಸಂಚಾಲಕ ರಾಜೇಶ್ ಶೆಟ್ಟಿ ಮಾನಂಪಾಡಿ ತಿಳಿಸಿದ್ದಾರೆ.

Comments

comments

Leave a Reply

Read previous post:
ತುಳು ನಾಡಿನ ಸಂಸ್ಕ್ರತಿ ಉಳಿಸಬೇಕಾಗಿದೆ

ಪಾಶ್ಚಾತ್ಯ ಅನುಕರಣೆಯ ಇಂದಿನ ಕಾಲದಲ್ಲಿ ತುಳು ನಾಡಿನ ಸಂಸ್ಕ್ರತಿ ಆಚರಣೆಯ ಬಗ್ಗೆ ನಮ್ಮ ಯುವ ಜನತೆಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಎಂದು ಮುಲ್ಕಿ ಸೀಮೆಯ ಅರಸರಾದ...

Close