ತುಳು ನಾಡಿನ ಸಂಸ್ಕ್ರತಿ ಉಳಿಸಬೇಕಾಗಿದೆ

ಪಾಶ್ಚಾತ್ಯ ಅನುಕರಣೆಯ ಇಂದಿನ ಕಾಲದಲ್ಲಿ ತುಳು ನಾಡಿನ ಸಂಸ್ಕ್ರತಿ ಆಚರಣೆಯ ಬಗ್ಗೆ ನಮ್ಮ ಯುವ ಜನತೆಗೆ ತಿಳಿ ಹೇಳುವ ಕೆಲಸ ಆಗಬೇಕಾಗಿದೆ ಎಂದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಪುನರೂರು ನಾಗವೀಣಾ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿಲ್ಪಾಡಿ ಕಾರ್ಯಕ್ಷೇತ್ರದ ಕಿಲ್ಪಾಡಿ, ಶಿಮಂತೂರು, ಅತಿಕಾರಿ ಬೆಟ್ಟು ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಭಾನುವಾರ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದು, ವಿಜಯಾ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಗೋಪಿನಾಥ ಪಡಂಗ, ನಿವೃತ್ತ ಮುಖ್ಯ ಶಿಕ್ಷಕ ಶಂಕರ ಶೆಟ್ಟಿ, ಮಾಲತಿ ಎನ್. ಸುವರ್ಣ, ಮೇಲ್ವಿಚಾರಕ ಕೊರಗಪ್ಪ ಸೇವಾನಿರತ ಪ್ರಸಾದ್, ಒಕ್ಕೂಟದ ಶಾರದಾ ವಸಂತ, ರಮಾ ಎನ್. ದೇವಾಡಿಗ, ಸುಜತಾ ಅಂಗರ ಗುಡ್ಡೆ ಉಪಸ್ಥಿತರಿದ್ದರು.
ಪ್ರತಿಮಾ ಶಿಮಂತೂರು ಸ್ವಾಗತಿಸಿ, ಇಂದಿರಾ ವಂದಿಸಿದರು. ಶ್ರೀನಿವಾಸ ಕೊಲೆಕಾಡಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಐಕಳದಲ್ಲಿ ಉದ್ಯೋಗ ಖಾತರಿ ಮಾಹಿತಿ ಶಿಬಿರ

ಕಿನ್ನಿಗೋಳಿ: "ಜನ ಶಿಕ್ಷಣ ಟ್ರಸ್ಟ್", "ಸುಗ್ರಾಮ ಸಂಘ" ಹಾಗೂ ಗ್ರಾಮ ಪಂಚಾಯಿತಿ ಐಕಳ ಸಹಭಾಗಿತ್ವದಲ್ಲಿ ಉದ್ಯೋಗ ಖಾತರಿ ಮಾಹಿತಿ ಶಿಬಿರ ಶನಿವಾರ ಕಿರೆಂ ಚರ್ಚ್ ಮಿನಿ ಹಾಲ್‌ನಲ್ಲಿ ನಡೆಯಿತು....

Close