ಮಾಜಿ ಯೋಧರಿಗೆ ಸನ್ಮಾನ

ಕಿನ್ನಿಗೋಳಿ ; ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರೋಟರ‍್ಯಾಕ್ಟ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಬಲ್ಲಾಣ ಪ್ರೀತಿ ಸದನದ ಅನಾಥ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಭಾರತ ಪಾಕಿಸ್ಥಾನ ಯುದ್ಧದಲ್ಲಿ ಸೇವೆಗೈದ ಮಾಜಿ ಯೋಧ ವಿಶ್ವನಾಥ ಕಾಮತ್ ಅವರನ್ನು ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.
ಭಗಿನಿ ಮಾರ್ಗರೆಟ್, ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಸಂಸ್ಥೆಯ ಜೆಸಿಂತಾ ಅಲ್ಮೇಡಾ, ಸಮಾಜ ಸೇವಕ ಜೆರಿ ಕ್ರಾಸ್ತ, ಲಯನ್ಸ್ ಅಧ್ಯಕ್ಷ ಬುಜಂಗ ಭಂಜನ್, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.

Comments

comments

Leave a Reply

Read previous post:
ರೋಟರಿ ಸದಸತ್ವ ಅಭಿವೃದ್ಧಿ ಮಾಸಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್‌ನ ರೋಟರಿ ಸದಸತ್ವ ಅಭಿವೃದ್ಧಿ ಮಾಸಾಚರಣೆ ಸೋಮವಾರ ಸಹಕಾರಿ ಸೌಧದಲ್ಲಿ ನಡೆಯಿತು. ರೋಟರಿ ಜಿಲ್ಲಾ ಸದಸತ್ವ ಅಭಿವೃದ್ಧಿ ಸಭಾಪತಿ ರೋ| ಪಿ.ಎಚ್. ಎಫ್....

Close