ಸಂಕಲಕರಿಯದಲ್ಲಿ 50 ನೇ ತಿಂಗೊಲ್ದ ಬೊಲ್ಪು

ನಮಗೆ ಮೂಲ ನಂಬಿಕೆಗಳು ಬೇಕು ಮೂಡ ನಂಬಿಕೆಗಳಲ್ಲ. ತುಳು ಆಚರಣೆಗಳ ಸಾಧಕ ಬಾಧಕಗಳನ್ನು ಜನರಿಗೆ ತಿಳಿ ಹೇಳಬೇಕು ಎಂದು ಮಂಗಳೂರಿನ ಸಂಸ್ಕಾರ ಭಾರತಿಯ ದಯಾನಂದ ಕತ್ತಲಸಾರ್ ಅವರು ಹೇಳಿದರು.
ಸಂಕಲಕರಿಯದ ವಿಜಯಾ ಯುವಕ ಸಂಘ ಮತ್ತು ಖುಷಿ ಮಹಿಳಾ ಮಂಡಲ ನೇತೃತ್ವದಲ್ಲಿ ನಡೆದ ೫೦ ನೇ ತಿಂಗೊಲ್ದ ಬೊಲ್ಪು ಹಾಗೂ ಆಟಿ ಆಚರಣೆಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ , ರೋಟರ‍್ಯಾಕ್ಟ್, ಎಸ್. ಕೋಡಿ ಸಂಗಮ ಮಹಿಳಾ ಮಂಡಲ ಹಾಗೂ ಮುಂಡ್ಕೂರು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಸಂಕಲಕರಿಯ ಶಾಲೆಯಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಗ್ರಾಮ ಕರಣಿಕ ಅವಿಲ್ ಡಿಸೋಜರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ವಹಿಸಿದ್ದರು. ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಯಶವಂತ, ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ, ರೋಟರ‍್ಯಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಎಸ್. ಕೋಡಿ ಸಂಗಮ ಮಹಿಳಾ ಮಂಡಲ ಅಧ್ಯಕ್ಷೆ ಜಯಲಕ್ಷ್ಮೀ ರಾವ್, ಮುಂಡ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯನಾಥ ಶೆಟ್ಟಿ, ಜೆ.ಸಿ.ಐ. ಅಧ್ಯಕ್ಷ ಸುರೇಂದ್ರ ಭಟ್, ಶಾಲಾ ಸಂಚಾಲಕಿ ಶಾರದಾ ಹೇಮನಾಥ ಶೆಟ್ಟಿ, ವಿಜಯ ಯುವಕ ಸಂಘದ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ಖುಷಿ ಮಹಿಳಾ ಮಂಡಲದ ಅಧ್ಯಕ್ಷೆ ಮೇರಿ ಸೆರಾವೋ, ಅಧ್ಯಕ್ಷೆ ಬೇಬಿ ಕೆ. ಶೆಟ್ಟಿ, ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ವಿಶ್ವಿತ್ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಸಾಲ್ಯಾನ್ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಸ್. ಕೋಡಿ ಸಂಗಮ ಮಹಿಳಾ ಮಂಡಲದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Comments

comments

Leave a Reply

Read previous post:
ತಪೋವನ ,66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ತೋಕೂರು : ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ , ತೋಕೂರು ಇದರ ಎನ್.ಎಸ್.ಎಸ್. ಘಟಕ ಮತ್ತು ರೋವರ‍್ಸ್ ಘಟಕಗಳ ಜಂಟೀ ಆಶ್ರಯದಲ್ಲಿ 66ನೇ ಸ್ವಾತಂತ್ರ್ಯೋತ್ಸವದ...

Close