ತಪೋವನ ,66ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ತೋಕೂರು : ಮುಲ್ಕಿ ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ , ತೋಕೂರು ಇದರ ಎನ್.ಎಸ್.ಎಸ್. ಘಟಕ ಮತ್ತು ರೋವರ‍್ಸ್ ಘಟಕಗಳ ಜಂಟೀ ಆಶ್ರಯದಲ್ಲಿ 66ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಬುಧವಾರ ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು. ಮುಲ್ಕಿಯ  ಪತ್ರಕರ್ತರಾದ ನರೇಂದ್ರ ಕೆರೆಕಾಡು ಇವರು 65ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ಗೈದು “ವಿದ್ಯಾರ್ಥಿಗಳು ಜೀವನಮೌಲ್ಯಗಳನ್ನು ಅರಿತು ಉತ್ತಮ ಪ್ರಜೆಯಾಗಿ ಬಾಳುವುದೇ ನಿಜವಾದ ದೇಶಸೇವೆ” ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯೋತ್ಸವದ ಶುಭಾಶಯ ನೀಡಿದರು. ರಘುರಾಮ ರಾವ್, ದಯಾನಂದ ಲಾಗ್ವಾಣ್‌ಕರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್ ಸ್ವಾಗತಿಸಿದರು, ಲಕ್ಷ್ಮೀಕಾಂತ ನಿರೂಪಿಸಿದರು, ವಿಶ್ವನಾಥ್ ರಾವ್ ವಂದಿಸಿದರು.

Comments

comments

Leave a Reply

Read previous post:
ನಿಧನ: ಕರ್ನಿರೆ ವಿಠಲ ಶೆಟ್ಟಿ

ಕಿನ್ನಿಗೋಳಿ: ಸಮಾಜ ಸೇವಕರಾದ ಕರ್ನಿರೆ ಪಿಲಿಬೆಟ್ಟು ಮನೆ ವಿಠಲ ಶೆಟ್ಟಿ [82] ಮಂಗಳವಾರ ನಿಧನರಾದರು. ಕರ್ನಿರೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಹಿರಿಯ ಸದಸ್ಯರಾಗಿದ್ದು, ಪ್ರಗತಿಪರ ಕೃಷಿಕರು,  ಶ್ರೀಯುತರು 3...

Close