ಕೆ.ಎಸ್.ಟಿ.ಎ. ಕಿನ್ನಿಗೋಳಿ : ವಾರ್ಷಿಕೋತ್ಸವ

ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್(ರಿ) ಕಿನ್ನಿಗೋಳಿಯ ಹನ್ನೆರಡನೇ ವರ್ಷದ ವಾರ್ಷಿಕೋತ್ಸವವು ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕೆ.ಎಸ್.ಟಿ.ಎ. ವಲಯ ಸಮಿತಿ ಅಧ್ಯಕ್ಷೆ ಅನುಸೂಯ ಆರ್. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೆ.ಎಸ್.ಟಿ.ಎ ರಾಜ್ಯ ಸಮಿತಿ ಅದ್ಯಕ್ಷ ಪ್ರವೀಣ್ ಸಾಲ್ಯಾನ್, ಕೆ.ಎಸ್.ಟಿ.ಎ. ಜಿಲ್ಲಾ ಸಮಿತಿ ಅಧ್ಯಕ್ಷ ರಮೇಶ್ ಮಾಡೂರು, ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಶಂಕರ್ ಕೋಟ್ಯಾನ್, ಕೆ.ಎಸ್.ಟಿ.ಎ. ಕಾಪು ಸಮಿತಿಯ ಅಧ್ಯಕ್ಷ ವಿಲಿಯಂ ಮಚಾದೋ, ಮೂಲ್ಕಿ ಮೂಡಬಿದ್ರಿ ಸಮಿತಿಯ ಅಧ್ಯಕ್ಷ ಉದಯ ಅಮೀನ್, ಕಾರ್ಯದರ್ಶಿ ರಾಜಾರಾಂ, ಜಯಲಕ್ಷ್ಮೀ ಆಚಾರ್ಯ, ಹರೀಶ್ ಜಿ. ಪದ್ಮಶಾಲಿ,ಜಯಂತ್ ಸಾಲ್ಯಾನ್, ಪ್ರಭಾಕರ್ ಶೆಟ್ಟಿಗಾರ್, ಶೇಖರ್ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಟೈಲರ‍್ಸ್ ವೃತ್ತಿಯಲ್ಲಿ ನಿವೃತ್ತಿಗೊಂಡ ಪುನರೂರು ಗೋಪಾಲ ಸಿ. ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಮೋಹನ್ ಎಸ್. ಸ್ವಾಗತಿಸಿದರು. ವಿಶ್ವನಾಥ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಬಹು ಗ್ರಾಮ ನೀರಿನ ಯೋಜನೆ ಪೂರ್ಣಕ್ಕೆ ನವಂಬರ್ ಗಡುವು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಬಳಿ ಶಾಂಭವೀ ನದಿಯಿಂದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿ ವೆಚ್ಚದ ಬಹು...

Close