ಮುಲ್ಕಿ ಯುವವಾಹಿನಿಯ ಆಟ-ನೋಟ-ಓಟ-ಪಾಠ

Photo by Narendra Kerekadu
ಮುಲ್ಕಿ : ಆ ಮಕ್ಕಳಿಗೆ ಅಮ್ಮಾ ಎಂದು ಕರೆಯಲು ಅಲ್ಲಿ ಯಾರು ಇಲ್ಲ, ಅಪ್ಪ ಎನ್ನುವ ಒಡನಾಟ ಇಲ್ಲವೇ ಇಲ್ಲ ಆದರೂ ಅವರ ಮನಸ್ಸು ಮಿಡಿಯುತ್ತಿತ್ತು ನಮಗೂ ಹೆತ್ತವರು ಇದ್ದರೂ ಅವರು ನಮ್ಮಿಂದ ದೂರ ಏಕೆ ಎನ್ನುವ ಮುಗ್ದ ಪ್ರಶ್ನೆಗೆ ಉತ್ತರ ನೀಡುವುದು ಅಷ್ಟು ಸುಲಭವಾಗಿರಲಿಲ್ಲ ಆದರೆ ಅಂದು ಆಗಸ್ಟ್ 15ರ ಸಂಜೆ ಆ ಹೆಣ್ಣು ಮಕ್ಕಳಿಗೆ ಎಲ್ಲರೂ ಸಿಕ್ಕಂತ ಖುಷಿ ಬೇರೆಯೇ ಆಗಿತ್ತು.
ಇದು ಮುಲ್ಕಿಯ ಸಿಎಸ್‌ಐ ಬಾಲಿಕಾಶ್ರಮದಲ್ಲಿ ಇರುವ ಹೆಣ್ಣು ಮಕ್ಕಳಿಗಾಗಿ ಮುಲ್ಕಿಯ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಹಮ್ಮಿಕೊಂಡಿದ್ದ ವಿಶಿಷ್ಠ ಆಟ-ನೋಟ-ಓಟ-ಪಾಠದ ಕಾಯಕ್ರಮದಲ್ಲಿ ಆಶ್ರಮದ ಎಲ್ಲಾ 70ಹೆಣ್ಣು ಮಕ್ಕಳು ಯುವವಾಹಿನಿ ಸದಸ್ಯರೊಂದಿಗೆ ಕುಟುಂಬದ ಸಮ್ಮಿಲನವನ್ನು ಕಂಡರು ಅಲ್ಲದೇ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಅವಲೋಕಿಸಿದರು.
ಈ ಬಾಲಿಕಾಶ್ರಮದಲ್ಲಿ ಐದು ವರ್ಷದಿಂದ ಹಿಡಿದು ಹದಿನೆಂಟರ ಹರೆಯದ ಆ ಬಾಲಿಕೆಯರು ಎಲ್ಲೋ ಇರುವ ತಮ್ಮ ತಾಯಿ ತಂದೆ ಬಂದು ಬಳಗವನ್ನು ಅನಿವಾರ್ಯವಾಗಿ ಬಿಟ್ಟು ಬಂದು ಇಲ್ಲಿನ ನಾಲ್ಕು ಗೋಡೆಯ ನಡುವಿನ ವಾತಾವರಣದಲ್ಲಿ ಜೀವನ ನಡೆಸುತ್ತ ಜೊತೆಗೆ ವಿದ್ಯೆಯನ್ನು ಕಲಿಯುವ ಯುವ ಮನಸ್ಸುಗಳಿಗೆ ಯುವವಾಹಿನಿ ಸಂಸ್ಥೆಯು ಆಸರೆಯಾಗಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದವು.
ಮೊದಲಿಗೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ವಿಭಿನ್ನವಾಗಿ ಶಿಕ್ಷಕಿ ಉಷಾ ಕೆರೆಕಾಡು ಮತ್ತು ಪತ್ರಕರ್ತ ನರೇಂದ್ರ ಕೆರೆಕಾಡು ದಂಪತಿಗಳು ರಸಪ್ರಶ್ನೆಯನ್ನು ಆಟದ ಮೂಲಕ ನೋಟವನ್ನು ಹರಿಸುವ ಹಲವು ಬಗೆಯ ಪ್ರಶ್ನೆಗಳ ಜೊತೆಗೆ ಬ್ರಿಟೀಷರಿಂದ ಭಾರತೀಯರನ್ನು ರಕ್ಷಿಸಿದ ಮಕ್ಕಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ವೀರ ಯೋಧರ ಗುರುತಿಸುವಿಕೆ, ಅಂದಿನ ಜೈಲು ಹಕ್ಕಿಗಳು, ಇಂದಿನ ರಾಜಕೀಯ ಖೈದಿಗಳ ನಡುವಿನ ಪ್ರತ್ಯೇಕ ಚಿತ್ರಣ, ದೇಶದ ಭವಿಷ್ಯವನ್ನು ರೂಪಿಸುವ ಪುಟಾಣಿಗಳ ಕಲರವ ಸದ್ದು ಮಾಡಿತು. ರತ್ತೋ ರತ್ತೋದ ಮಕ್ಕಳ ಆಟದಲ್ಲಿ ಚಿತ್ರ ದುರ್ಗದ ಕಲ್ಲಿನಕೋಟೆಯ ಕಿಂಡಿಯಲ್ಲಿ ಬಂದ ವೈರಿಗಳನ್ನು ಮಕ್ಕಳು ಸದೆ ಬಡಿದರು.
ಮಕ್ಕಳೊಂದಿಗೆ ಯುವವಾಹಿನಿಯ ಸುಮಾರು 50ಕ್ಕಿಂತ ಹೆಚ್ಚು ಸದಸ್ಯರು ಗಾಂಧಿ ಟೋಪಿ ಧರಸಿ ಮಕ್ಕಳಾಗಿ ಸ್ವಾತಂತ್ರ್ಯ ಸಂಗ್ರಾಮದ ವೀರರನ್ನು ಆರಿಸಿ ಕೂಡಿಸುವ ಕ್ರೀಡೆ ಗಮನ ಸೆಳೆಯಿತು. ವಿಶೇಷವಾಗಿ ಪ್ರತಿ ವಿಭಾಗದಲ್ಲಿಯೂ ಗೆದ್ದ ಮಕ್ಕಳಿಗೆ ಮತ್ತೊಮ್ಮೆ ಅವಕಾಶ ನೀಡದೆ ಸೋತ ಮಕ್ಕಳಿಗೆ ಮತ್ತಷ್ಟು ಅವಕಾಶ ನೀಡಿ ಗೆಲ್ಲಿಸುವ ಆಟ ಮುದನೀಡಿತು. ರಾಷ್ಟ್ರ ಧ್ವಜದಿಂದ ಹಿಡಿದು, ರಾಷ್ಟ್ರ ಗೀತೆಯ ಹಲವು ಅಮೂಲ್ಯ ಪ್ರಶ್ನೋತ್ತರಗಳು ನಡು ನಡುವೆ ಸಾಗಿತ್ತು.
ಎಲ್ಲಾ ಮಕ್ಕಳಿಗೂ ಬಹುಮಾನವಾಗಿ ಡ್ರಾಯಿಂಗ್ ಪುಸ್ತಕ, ಕಲರ್ ಪೆನ್ಸಿಲ್, ಡಿಕ್ಷೆನರಿ, ಕಾಪಿ ಪುಸ್ತಕದ ಜೊತೆಗೆ ಕಥೆ, ಕವನದ, ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆಯಾಗಿ ವಿತರಿಸಲಾಯಿತು. ಮುಖ್ಯ ಮಾರ್ಗದರ್ಶಕದ ಮಾತನ್ನು ಸುರತ್ಕಲ್‌ನ ಗೋವಿಂದದಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜಯಂತಿ ಗಣೇಶ್ ಅಮಿನ್ ಸಂಕಮಾರ್ ಮಕ್ಕಳಿಗೆ ತಿಳಿಹೇಳಿದರು.
ಮಂಗಳೂರಿನಲ್ಲಿ ಕಳೆದ 14 ವರ್ಷದ ಹಿಂದೆ ಯುವವಾಹಿನಿಯನ್ನು ಸ್ಥಾಪಿಸಿದ ಸಂಜೀವ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಕಿಶೋರ್ ಬಿಜೈ ಅಧ್ಯಕ್ಷತೆಯಲ್ಲಿ ಮುಲ್ಕಿ ಯುವವಾಹಿನಿ ಅಧ್ಯಕ್ಷ ರಾಮಚಂದ್ರ ಕೋಟ್ಯಾನ್ ಬಹುಮಾನಗಳನ್ನು ವಿತರಿಸಿದರು. ಬಾಲಿಕಾಶ್ರಮದ ರೇಷ್ಮಾರವರು ಯವವಾಹಿನಿಯ ಒಟನಾಟವನ್ನು ಇಲ್ಲಿಗೆ ಮುಕ್ತಾಯಗೊಳಿಸಬೇಡಿ ಸದಾ ನೀವು ನಮ್ಮೋಂದಿಗೆ ಬೆರೆಯುತ್ತಿರಿ ಎಂದು ಕೇಳಿಕೊಂಡರು.
ಕಾರ್ಯಕ್ರಮದ ನಿರ್ದೇಶಕರಾದ ರಕ್ಷಿತಾ ಯೋಗೀಶ್ ಕೋಟ್ಯಾನ್ ಮತ್ತು ವಿಜಯ್ ಅಮಿನ್ ಕುಬೆವೂರುರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದರು. ಹಿರಿಯ ಜಾನಪದ ವಿದ್ವಾಂಸ ಗಣೇಶ್ ಅಮಿನ್ ಸಂಕಮಾರ್, ಹಿರಿಯ ಸಮಾಜ ಸೇವಕ ಬಾಲಚಂದ್ರ ಸನಿಲ್, ರಂಗಕರ್ಮಿ ಚಂದ್ರಶೇಖರ ಸುವರ್ಣ ಈ ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಮೂಹಿಕ ಊಟೋಪಚಾರವು ನಡೆದು ಯವವಾಹಿನಿಯನ್ನು ತಮ್ಮ ಮನಸ್ಸಿನಲ್ಲಿ ಮಕ್ಕಳು ಅಚ್ಚೊತ್ತಿದರು.

 

Comments

comments

Leave a Reply

Read previous post:
ಕೆ.ಎಸ್.ಟಿ.ಎ. ಕಿನ್ನಿಗೋಳಿ : ವಾರ್ಷಿಕೋತ್ಸವ

ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್(ರಿ) ಕಿನ್ನಿಗೋಳಿಯ ಹನ್ನೆರಡನೇ ವರ್ಷದ ವಾರ್ಷಿಕೋತ್ಸವವು ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕೆ.ಎಸ್.ಟಿ.ಎ. ವಲಯ ಸಮಿತಿ ಅಧ್ಯಕ್ಷೆ ಅನುಸೂಯ ಆರ್. ಕೋಟ್ಯಾನ್...

Close