ಪೋಷಕರು ಮತ್ತು ಅಧ್ಯಾಪಕರ ಸೌರ್ಹಾದ ಸೇತುಬಂಧ

ತೋಕೂರು: ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ಇಲ್ಲಿನ2012-13 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಎರಡು ದಿನಗಳ “ಸೇತುಬಂಧ” ಕಾರ್ಯಕ್ರಮ ದಿನಾಂಕ ಗುರುವಾರದಂದು ನಡೆಯಿತು. ಡಾ| ಎನ್.ಎಸ್.ಎ.ಎಮ್ ಪದವಿ ಕಾಲೇಜು ನಿಟ್ಟೆ ಪ್ರಾಂಶುಪಾಲೆಯರಾದ ಡಾ| ವೀಣಾ ಬಿ.ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ “ವಿವಿಧ ಶಾಲಾ ಕಾಲೇಜುಗಳಿಂದ ಹೊರಬಂದು ಇಲ್ಲಿಯ ವಿಭಿನ್ನ ರೀತಿಂii ಶಿಕ್ಷಣವನ್ನು ಪಡೆಯಬೇಕಾಗಿದ್ದು ಅದಕ್ಕಾಗಿ ಮಾನಸಿಕವಾಗಿ ತಯಾರಾಗಬೇಕಾಗುವಲ್ಲಿ ಈ ಸೇತುಬಂಧ ಕಾರ್ಯಕ್ರಮ ಸಹಕಾರಿಯಾಗುತ್ತದೆ ಮುಂದಿನ 2 ವರ್ಷಗಳಲ್ಲಿ ಕಠಿಣ ಪರಿಶ್ರಮ , ಸಮಯಪಾಲನೆ, ಶಿಸ್ತು, ಕಾರ್ಯದಕ್ಷತೆಯಿಂದ ಕಲಿತು ಸಮಾಜದಲ್ಲಿ ಯೋಗ್ಯ ವ್ಯಕ್ತಿಗಳಾಗಿ ಬಾಳಿ ಎಂದು ಹಿತವಚನವಿತ್ತರು. ಕೆನರಾ ಲೈಟಿಂಗ್ ಇಂಡಸ್ಟ್ರೀಸ್, ಪುನರೂರು ಇದರ ಜನರಲ್ ಮೆನೇಜರ್ ರೋನಾಲ್ಡ್ ಎಸ್. ಡಿಸೋಜಾ ಇವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯಾವುದೇ ಕೆಲಸವನ್ನು ಸಂತೋಷದಿಂದ ಮಾಡಿ ಹಾಗೂ ಆತ್ಮವಿಶ್ವಾಸವನ್ನು ಬೆಳಸಿದರೆ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಬಹುದು ಹಾಗೂ ಈ ಸೇತುಬಂಧ ಕಾರ್ಯಕ್ರಮದಿಂದ ಪೋಷಕರು ಮತ್ತು ಅಧ್ಯಾಪಕರ ನಡುವೆ ಸೌರ್ಹಾದ ವಾತವರಣದ ಬೆಳೆಯಲಿ ಎಂದು ಶುಭಹಾರೈಸಿದರು. ಹೆಬಿಕ್ ಕೈಗಾರಿಕಾ ತರಬೇತಿ ಸಂಸ್ಥೆ ಬಲ್ಮಠ, ಮಂಗಳೂರು ಇದರ ಪ್ರಾಚಾರ್ಯರಾದ ಚೇತನ್ ಆರ್. ಇವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಗಳಿಕೆ ಎಂಬ ಧ್ಯೇಯ ಹೊಂದಿದರೆ ಜೀವನದಲ್ಲಿ ಹಣದ ಮಹತ್ವ ಗೊತಾಗುತ್ತದೆ ಹಾಗೂ ಇದು ನಿಮ್ಮ ಜೀವನದಲ್ಲಿ ಯಶಸ್ಸನ್ನು ಹೊಂದುವಲ್ಲಿ ಸಹಾಕಾರಿಯಾಗುತ್ತದೆ ಎಂದರು. ಲಕ್ಷ್ಮೀಕಾಂತ ಕಾರ್ಯಕ್ರಮ ನಿರೂಪಿಸಿದರು, ಸಂಸ್ಥೆಯ ಪ್ರಾಂಶುಪಾಲರಾದ ವೈ.ಎನ್.ಸಾಲಿಯಾನ್ ಸ್ವಾಗತಿಸಿದರು. ಮುಖ್ಯ ಅತಿಥಿಯಾದ ರಘುರಾಮ್ ರಾವ್ ಶುಭ ಹಾರೈಸಿದರು. ವಿಶ್ವನಾಥ್ ರಾವ್ ವಂದಿಸಿದರು.

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಪ್ರೋ ಬಾಲಕೃಷ್ಣ ಶೆಟ್ಟಿ, ಕೆ.ಎಸ್.ವಿ ಬಾಳಿಗಾ, ಪ್ರೋ. ಎನ್. ಜಯರಾಮ ಶೆಟ್ಟಿ, ಬಿ.ಸಿ.ರಾವ್ ಶಿವಪುರ, ಡಾ| ಸುಧೀರ್‌ರಾಜ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಂಸ್ಥೆಯ ಅಧ್ಯಾಪಕ ವೃಂದದವರಿಂದ ವಿವಿಧ ವಿಷಯಗಳಲ್ಲಿ ವಿದ್ಯಾಥಿಗಳಿಗಾಗಿ ತಿಳುವಳಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಜರಗಲಿವೆ. ದಿನಾಂಕ 18-8-2012 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಪಕ್ಷಿಕೆರೆ ಪವನ್ ಕ್ಲಿನಿಕ್ ಇದರ ವೈದ್ಯೆಯಾದ ಡಾ| ಈಶ್ವರೀ ಪ್ರಜ್ಞಾ ಭಾಗವಹಿಸಲಿದ್ದಾರೆ.

Comments

comments

Leave a Reply

Read previous post:
ಮುಲ್ಕಿ ಯುವವಾಹಿನಿಯ ಆಟ-ನೋಟ-ಓಟ-ಪಾಠ

Photo by Narendra Kerekadu ಮುಲ್ಕಿ : ಆ ಮಕ್ಕಳಿಗೆ ಅಮ್ಮಾ ಎಂದು ಕರೆಯಲು ಅಲ್ಲಿ ಯಾರು ಇಲ್ಲ, ಅಪ್ಪ ಎನ್ನುವ ಒಡನಾಟ ಇಲ್ಲವೇ ಇಲ್ಲ ಆದರೂ ಅವರ...

Close