ಬಹು ಗ್ರಾಮ ನೀರಿನ ಯೋಜನೆ ಪೂರ್ಣಕ್ಕೆ ನವಂಬರ್ ಗಡುವು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಬಳಿ ಶಾಂಭವೀ ನದಿಯಿಂದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನವೆಂಬರ್ ನೊಳಗೆ ಪೂರ್ಣಗೊಳಿಸಲು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಡಾ| ವಿಜಯ ಪ್ರಾಕಾಶ್ ತಿಳಿಸಿದ್ದಾರೆ.
ಅವರು ಗುರುವಾರ ಯೋಜನಾ ಘಟಕದ ನೀರಿನ ಟ್ಯಾಂಕ್ ನಿರ್ಮಾಣ ಗೊಳ್ಳುತ್ತಿರುವ ಕೊಲ್ಲೂರು ಪ್ರದೇಶಕ್ಕೆ ಬೇಟಿ ನೀಡಿ ಕಾಮಗಾರಿ ವೀಕ್ಷಿಸಿ ಕಳೆದ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಾಗಿದ್ದು ಕಾಮಗಾರಿಯ ಸಿವಿಲ್ ವಿಭಾಗದ ಕೆಲಸ ಮುಕ್ತಾಯ ಹಂತದಲ್ಲಿದ್ದು, 74ಕಿ.ಮೀ ಉದ್ದದ ಪೈಪ್ ಅಳವಡಿಕೆಯಲ್ಲಿ 68 ಕಿ.ಮೀ ಪೈಪ್ ಅಳವಡಿಕೆಯಾಗಿದೆ. ಮೆಕ್ಯಾನಿಕ್ ಕೆಲಸ ನಿಧಾನ ಗತಿಯಲ್ಲಿ ಸಾಗುವ ಕುರಿತು ಗುತ್ತಿಗೆದಾರರನ್ನು ಮತ್ತು ಇಂಜಿನೀಯರರನ್ನು ತರಾಟೆಗೆ ತೆಗೆದುಕೊಂಡರು.
ಅನುದಾನ ಬಿಡುಗಡೆಗೊಳಿಸಿದ ಕಳೆದ 3 ತಿಂಗಳ ಹಿಂದೆ ದೆಹಲಿಯ 30 ಸಂಸದರ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಕಾಮಗಾರಿಯ ಕುರಿತು ಅನುಮಾನ ವ್ಯಕ್ತ ಪಡಿಸಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಈ ಕಾಮಗಾರಿ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ. ಇನ್ನು ಪ್ರತಿ ತಿಂಗಳು ಕಾಮಗಾರಿ ಪ್ರಗತಿಯ ಬಗ್ಗೆ ಸಭೆ ಪರಿಶೀಲನೆ ಮಾಡಲಾಗುವುದು. ಹಾಗೂ 17 ಗ್ರಾಮಗಳ ಸಭೆಯನ್ನು ಕರೆದು ವಿಚಾರ, ವಿಮರ್ಶೆ ಮಾಡಲಾಗುವುದು.
ಮಳವೂರು ಮತ್ತು ಕಿನ್ನಿಗೋಳಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದೆ. ಬೋರ್ ವೆಲ್ ಗಳು ಶಾಶ್ವತ ಪರಿಹಾರವಲ್ಲ, ಆದುದರಿಂದ ದ.ಕ ಜಿಲ್ಲೆಯಲ್ಲಿ ಒಟ್ಟು 20 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಇಂಜಿನೀಯರ್‌ಗಳಾದ ಸತ್ಯನಾರಾಯಣ, ಷಣ್ಮುಗಂ, ಪ್ರಶಾಂತ್, ನಝೀರ್, ಜಿಲ್ಲಾ ಸ್ಥಾಯೀ ಸಮಿತಿ ಅಧ್ಯಕ್ಷ ಈಶ್ವರ ಕಟೀಲು, ಮೆನ್ನಬೆಟ್ಟು ಗ್ರಾ. ಪಂ ಉಪಾಧ್ಯಾಕ್ಷ ಜನಾರ್ಧನ ಕಿಲೆಂಜೂರು, ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮಾಜಿ ಯೋಧರಿಗೆ ಸನ್ಮಾನ

ಕಿನ್ನಿಗೋಳಿ ; ಕಿನ್ನಿಗೋಳಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ರೋಟರ‍್ಯಾಕ್ಟ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಬಲ್ಲಾಣ ಪ್ರೀತಿ ಸದನದ ಅನಾಥ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು....

Close