ಕಟೀಲು ಬಳಿ ಬಸ್ಸು ಬೈಕ್ ಅಪಘಾತ

ಕಟೀಲು: ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಬಳಿ ಬಸ್ಸು ಮತ್ತು ಹೋಂಡಾ ಆಕ್ವಿವಾ ಸ್ಕೂಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ವಾಸುದೇವ ಉಡುಪ (ಸುಮಾರು 53 ವರ್ಷ) ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಕಟೀಲು ದುರ್ಗಾಪರಮೇಶ್ವರೀ ದೇವಳದಲ್ಲಿ ಶಾಂತಿವಿಲೇದಾರ ಕೆಲಸ ಮಾಡುತ್ತಿರುವ ವಾಸುದೇವ ಉಡುಪರು ಕಳೆದ ಹತ್ತು ವರುಷಗಳಿಂದ ದೇವಳದಲ್ಲಿ ಉತ್ಸವ ಅಲ್ಲದೆ ಇತರ ಸಂದರ್ಭದಲ್ಲಿ ದೇವರು ಹೊರುವ ಸೇವೆ ಸಲ್ಲಿಸುತ್ತಿದ್ದರು.ಶನಿವಾರ ದೇಗುಲದಲ್ಲಿ ಶಾಂತಿ ಕೆಲಸ ಮುಗಿಸಿ, ಗಿಡಿಗೆರೆ ಬಳಿಯ ಮನೆಗೆ ಹೋಗುತ್ತಿದ್ದಾಗ ಬಸ್ಸು ಡಿಕ್ಕಿ ಹೊಡೆದು ಮೃತಪಟ್ಟರು. ದೇಗುಲದ ಅರ್ಚಕರು, ಸಿಬಂದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಪಾರ್ತಿ ಸುಬ್ಬ ಕವಿ-ಕಾವ್ಯ ದರ್ಶನ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷದ ಸಭಾ ಭವನದಲ್ಲಿ ನಡೆದ ಯಕ್ಷಲಹರಿಯ ಇಪ್ಪತ್ತೆರಡನೇ ವಾರ್ಷಿಕೋತ್ಸವದ ಪ್ರಯುಕ್ತ "ಪಾರ್ತಿ ಸುಬ್ಬ ಕವಿ ಕಾವ್ಯ ದರ್ಶನ" ಉಪನ್ಯಾಸ ಹಾಗೂ ಯಕ್ಷಗಾನ ಭಾಗವತಿಕೆ ನಡೆಯಿತು....

Close