ಕಿನ್ನಿಗೋಳಿಯಲ್ಲಿ ಪಾರ್ತಿ ಸುಬ್ಬ ಕವಿ-ಕಾವ್ಯ ದರ್ಶನ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷದ ಸಭಾ ಭವನದಲ್ಲಿ ನಡೆದ ಯಕ್ಷಲಹರಿಯ ಇಪ್ಪತ್ತೆರಡನೇ ವಾರ್ಷಿಕೋತ್ಸವದ ಪ್ರಯುಕ್ತ “ಪಾರ್ತಿ ಸುಬ್ಬ ಕವಿ ಕಾವ್ಯ ದರ್ಶನ” ಉಪನ್ಯಾಸ ಹಾಗೂ ಯಕ್ಷಗಾನ ಭಾಗವತಿಕೆ ನಡೆಯಿತು.

ಯಕ್ಷಗಾನದ ದಿಗ್ಗಜ ಬಲಿಪ ನಾರಾಯಣ ಭಾಗವತರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು.
ವೇದಿಕೆಯಲ್ಲಿ ಕೆ. ಲವ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್, ಪಿ. ಸತೀಶ್ ರಾವ್ ಉಪಸ್ಥಿತರಿದ್ದರು. ಇ. ಶ್ರೀನಿವಾಸ್ ಭಟ್ ಸ್ವಾಗತಿಸಿ, ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಶ್ರೀಧರ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಚಿಂತಕರಾದ ಡಾ| ಎಂ. ಪ್ರಭಾಕರ ಜೋಶಿ ಯಕ್ಷಗಾನದ ಸೀಮಾಪುರುಷ ಪಾರ್ತಿ ಸುಬ್ಬ ಕವಿ ದರ್ಶನದ ಬಗ್ಗೆ ಪ್ರಧಾನ ಉಪನ್ಯಾಸವಿತ್ತರು.
ಬಳಿಕ ಬಲಿಪ ನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಶಂಕರ ನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಮನಾಭ ಉಪಾಧ್ಯಾಯ ಮತ್ತು ಪ್ರಭಾಕರ ರಾವ್ ಪಾರ್ತಿ ಸುಬ್ಬ ಕಾವ್ಯ ದರ್ಶನ ವನ್ನು ನಡೆಸಿ ಕೊಟ್ಟರು. ಉಜಿರೆ ಅಶೋಕ ಭಟ್ ನಿರೂಪಿಸಿದರು.

Comments

comments

Leave a Reply

Read previous post:
ನಡುಗೋಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಕಿನ್ನಿಗೋಳಿ : ನಡುಗೋಡು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ 66ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು ಧ್ವಜಾರೋಹಣವನ್ನು ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ನೆರವೇರಿಸಿದರು. ವನಿತಾ ಶೆಟ್ಟಿ ಸ್ಮರಣಾರ್ಥ 7ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ...

Close