ಪೌಷ್ಟಿಕ ಆಹಾರ ಮಹತ್ವ ಮತ್ತು ಸೌಹಾರ್ದ ಕೂಟ

ಕಿನ್ನಿಗೋಳಿ : ಸಂಜೀವಿನಿ ಸಮಗ್ರ ಸಮುದಾಯ ಆರೋಗ್ಯ ಕೇಂದ್ರ , ಸ್ಪಂದನ, ಸ್ಪೂರ್ತಿ ಹಾಗೂ ಸುರಕ್ಷಾ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಮೂರುಕಾವೇರಿ ಕಮ್ಮಜೆಯ ನೀತಿ ಸದನದಲ್ಲಿ ಪೌಷ್ಟಿಕ ಆಹಾರ ಮಹತ್ವದ ಕುರಿತು ಮಾಹಿತಿ ಶಿಬಿರ ಮತ್ತು ಸೌಹಾರ್ದ ಕೂಟ ಭಾನುವಾರ ನಡೆಯಿತು.
ಸಂಜೀವಿನಿ ಸಂಚಾಲಕಿ ಭಗಿನಿ ಹೋಪ್ ಅಧ್ಯಕ್ಷತೆ ವಹಿಸಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರದ ಅಗತ್ಯವಿದ್ದು ಪಾಲಕರು ಈ ಕುರಿತು ಕಾಳಜಿವಹಿಸಬೇಕಾಗಿದೆ ಎಂದರು. ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಭಂದಕ ಮಂಜುನಾಥ ಮಲ್ಯ, ಐಕಳ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಸುಶಾಂತ್, ದಿನೇಶ್, ಸ್ಪಂದನ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರಭಾ, ಕಾರ್ಯದರ್ಶಿ ಕುಸುಮ ಉಪಸ್ಥಿತರಿದ್ದರು.
ಪ್ರತಿಭಾ ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸರೋಜಿನಿ ಸ್ವಾಗತಿಸಿ, ಸಂಜೀವಿನಿ ಸಂಸ್ಥೆಯ ಲಲಿತಾ ಭಾಸ್ಕರ್ ಪ್ರಸ್ತಾವಿಸಿದರು. ಬಿಂದಿಯಾ ವಂದಿಸಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಯಕ್ಷಲಹರಿ-ಯಕ್ಷಾಷ್ಟಕ ಸಮಾರೋಪ

ಕಿನ್ನಿಗೋಳಿ : ಕಲೆಯ ಆರ್ಥಿಕ ಉನ್ನತಿಯನ್ನು ಅದರ ಬೆಳವಣಿಗೆಯಲ್ಲಿ ಕಾಣಬಹುದು ಎಂದು ಮಲ್ಪೆ ಉದ್ಯಮಿ ಪ್ರಮೋದ್ ಮದ್ವರಾಜ್ ಹೇಳಿದರು. ಅವರು ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ...

Close