ಯಕ್ಷಲಹರಿ-ಯಕ್ಷಾಷ್ಟಕ ಸಮಾರೋಪ

ಕಿನ್ನಿಗೋಳಿ : ಕಲೆಯ ಆರ್ಥಿಕ ಉನ್ನತಿಯನ್ನು ಅದರ ಬೆಳವಣಿಗೆಯಲ್ಲಿ ಕಾಣಬಹುದು ಎಂದು ಮಲ್ಪೆ ಉದ್ಯಮಿ ಪ್ರಮೋದ್ ಮದ್ವರಾಜ್ ಹೇಳಿದರು. ಅವರು ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಕಿನ್ನಿಗೋಳಿ ಯಕ್ಷಲಹರಿಯ ಇಪ್ಪತ್ತೆರಡನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕಲಾ ಪ್ರಾಕಾರಗಳಿಗೆ ಉನ್ನತ ಮಟ್ಟದ ಆರ್ಥಿಕ ಪ್ರೋತ್ಸಾಹ ಈ ದಿನಗಳಲ್ಲಿ ಅಗತ್ಯವಿದ್ದು ಇದರಲ್ಲಿ ಯಕ್ಷನಾನವೂ ಹೊರತಲ್ಲ ಎಂದ ಅವರು ಕಲಾಪ್ರಿಯರು ಕಲಾವಿದರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುವುದು ಬಹಳ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ಮಹಾ ಪ್ರಭಂದಕರಾದ ಎಂ.ಎಸ್.ಮಹಾಬಲೇಶ್ವರ ಭಟ್ ವಹಿಸಿದ್ದರು. ಕಟೀಲಿನ ಪ್ರಧಾನ ಅರ್ಚಕ ವೇ. ಮೂ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಮಾಜಿ ಕ.ಸಾ.ಪ. ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಾಶಂಸನೆ ನೀಡಿದರು.
ಸಾಧಕರಿಗೆ ಅಭಿನಂದನೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವಿದ್ವಾನ್ ಪಂಜ ಭಾಸ್ಕರ ಭಟ್ ಮತ್ತು ಕಟೀಲು ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಬಾಲಕೃಷ್ಣ ಶೆಟ್ಟಿ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಹವ್ಯಾಸಿ ಯಕ್ಷಗಾನ ಕಲಾವಿದ ಕೆ.ವಿಶ್ವೇಶ ರಾವ್, ಕಲಾ ಪೋಷಕ ಮುಂಬೈ ಉದ್ಯಮಿ ಏಳಿಂಜೆ ಕೊಂಜಾಲು ಗುತ್ತು ಅನಿಲ್ ಶೆಟ್ಟಿ,ನಾರಾವಿ ಸೂರ್ಯನಾರಾಯಣ ದೇವಳದ ಪ್ರಧಾನ ಅರ್ಚಕರಾದ ಕೃಷ್ಣ ತಂತ್ರಿ, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಅಶೋಕ್ ಭಟ್ ಉಜಿರೆ ಹಾಗೂ ವೈ ಯೋಗೀಶ್ ರಾವ್ ಇವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಕಾರ್ಪೋರೇಶನ್ ಬ್ಯಾಂಕ್ ಉಪ ಮಹಾ ಪ್ರಭಂದಕರಾದ ಗೋವಿಂದ ಪೈ, ಕಟೀಲು ಯಕ್ಷಗಾನ ಮಂಡಲಿಗಳ ಸಂಚಾಲಕ ಕಲ್ಲಾಡಿ ದೇವೀ ಪ್ರಸಾದ ಶೆಟ್ಟಿ, ಉದ್ಯಮಿ ರಮೇಶ್ ಎಲ್. ಕುಂದರ್, ಉದ್ಯಮಿ ಶ್ರೀಪತಿ ಭಟ್, ಇಂಡಿಯನ್ ಓವರ‍್ಸೀಸ್ ಬ್ಯಾಂಕ್ ಪ್ರಭಂದಕ ಪಿ.ಕೆ.ರವೀಂದ್ರ ಪೈ, ಉದ್ಯಮಿ ಅನಂತಕೃಷ್ಣ ರಾವ್, ಎಳತ್ತೂರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಭುಜಂಗ ಭಂಜನ್, ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಉದ್ಯಮಿ ಪಿ.ಸತೀಶ್ ರಾವ್ ವೇದಿಕೆಯಲ್ಲಿದ್ದರು.
ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ್ ಭಟ್ ಸ್ವಾಗತಿಸಿದರು. ಯುಗಪುರುಷದ ಭುವನಾಭಿರಾಮ ಉಡುಪ ಪ್ರಸ್ತಾವನೆ ಗೈದರು. ಕಾರ್ಯದರ್ಶಿ ಶ್ರೀಧರ ಡಿ.ಎಸ್ ವಂದಿಸಿದರು. ಡಾ.ಎಂ.ರಾಧಾಕೃಷ್ಣ ಭಟ್, ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣಾ ಕಾರ್ಯಕ್ರಮ ಭಾನುವಾರ ಆಗಸ್ಟ್ 26

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ, ರೋಟರಾಕ್ಟ್, ಲಯನ್ಸ್, ಇನ್ನರ್ ವೀಲ್, ಸೌತ್ ಕೆನೆರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಹಾಗೂ ಯುಗಪುರುಷ ಕಿನ್ನಿಗೋಳಿ ಸೇವಾ ಸಂಸ್ಥೆಗಳ ಜಂಟೀ ಆಶ್ರಯದಲ್ಲಿ ಮಂಗಳೂರು...

Close