ದೇವಾಲಯದ ಪ್ರವಾಸ ನೂತನ ಯೋಜನೆ ಶೀಘ್ರ ಜಾರಿ; ಶ್ರೀನಿವಾಸ ಪೂಜಾರಿ

News by Narendra Kerekadu

ಮುಲ್ಕಿ; ರಾಜ್ಯದ ಪ್ರಮುಖ 25ಧಾರ್ಮಿಕ ಕ್ಷೇತ್ರಗಳನ್ನು ವಿಶೇಷವಾಗಿ ಸಂದರ್ಶಿಸುವ ಹಾಗೂ ಅಲ್ಲಿ ಪ್ರವಾಸಿಗರಿಗೆ ಕೊಠಡಿ, ಬಾಲಭವನ, ಕ್ಷೇತ್ರದ ಬಗ್ಗೆ ವಿವರಿಸುವ ಗೈಡ್, ಕ್ಷೇತ್ರದ ಇತಿಹಾಸದ ಬಗ್ಗೆ ಸಂಪೂರ್ಣ ಮಾಹಿತಿ ಹೀಗೆ ಒಂದು ಕುಟುಂಬ ಸಹಿತ ಈ ಪ್ರವಾಸವನ್ನು ಕೈಗೊಳ್ಳುವುದಕ್ಕೆ ದೇವಾಲಯದ ಪ್ರವಾಸ ಎನ್ನುವ ನೂತನ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರಲಾಗುವುದು ಎಂದು ರಾಜ್ಯ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಸುಮಾರು ಒಂದು ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲು ಚಿಂತನೆ ನಡೆಸಲಾಗಿದೆ. ನಮ್ಮ ಧರ್ಮ ಸಂಸ್ಕಾರದ ಬಗ್ಗೆ ಜನರಿಗೆ ಸ್ಪಷ್ಟವಾಗಿ ಮಾಹಿತಿ ನೀಡುವ ಕಾರ್ಯಕ್ರಮ ಎಂಬ ದೃಷ್ಟಿಯಲ್ಲಿ ಇದರ ಬಗ್ಗೆ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುವುದು ಅಲ್ಲದೇ ಇದಕ್ಕೆ ಪ್ರವಾಸೋದ್ಯಮ ಇಲಾಖೆಯ ಯೋಜನೆಯಲ್ಲ ಸಂಪೂರ್ಣ ದತ್ತಿ ಇಲಾಖೆಯದ್ದಾಗಿದೆ ಎಂದರು.

ಕಟೀಲು ಮತ್ತು ಸುಬ್ರಹ್ಮಣ್ಯದಲ್ಲಿ ಸಾಮಾಗ್ರಿ ಖರೀದಿಯ ಬಗ್ಗೆ ಇರುವ ಗೊಂದಲವನ್ನು ಹಾಗೂ ಸೋರುವಿಕೆಯನ್ನು ತಡೆಯಲು ಈ ಕ್ಷೇತ್ರದಲ್ಲಿನ ದೂರುಗಳನ್ನು ಪರಿಶೀಲಿಸಲಾಗುವುದು ಅಲ್ಲದೇ ನಿರ್ದಿಷ್ಟವಾದ ಅಧಿಕಾರಿಗಳ ನಿಯೋಜನೆಯಿಂದ ಇಂತಹ ಪ್ರಮಾದ ಆಗುವುದಿಲ್ಲ ಎನ್ನುವ ಉದ್ದೇಶದಿಂದಲೆ ಈ ಸಂದರ್ಭದಲ್ಲಿ ರಾಜ್ಯದಲ್ಲಿ 300 ರಿಂದ 400 ಸಿಬ್ಬಂದಿಗಳನ್ನು ಇಲಾಖೆ ನಿಯೋಜನೆ ಮಾಡಲಿದೆ, ಲೋಕಸೇವಾ ಆಯೋಗದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಇದನ್ನು ಭರ್ತಿ ಮಾಡಲಾಗುವುದು ಎಂದರು.

ರಾಜ್ಯದ 30 ಜಿಲ್ಲೆಯಲ್ಲಿ 12 ಜಿಲ್ಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಜಾರಿ ಆಗಿಲ್ಲ, ಈ ಬಗ್ಗೆ ಆ.22ರಂದು ನಡೆಯುವ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಕ್ರಮ ಕೈಗೊಂಡು ಬಪ್ಪನಾಡು ಸಹಿತ ವ್ಯವಸ್ಥಾಪನಾ ಮಂಡಳಿಯನ್ನು ರಚಿಸಲು ಚಿಂತನೆ ನಡೆದಿದೆ ಇಲ್ಲಿ ರಥಕ್ಕೆ ಅನುದಾನ ಮತ್ತು ಅಭಿವೃದ್ದಿಗೆ ಸಾಕಷ್ಟು ಅನುದಾನದ ಬಗ್ಗೆಯೂ ಇರುವ ಬೇಡಿಕೆಯನ್ನು ಪರಿಹರಿಸಲಾಗುವುದು ಎಂದರು.

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಾಸ್ಟಿಕ್ ನಿಷೇಧವನ್ನು ಜಾರಿಗೆ ತರಲು ಕೆಲವೊಂದು ನಿಯಮಗಳನ್ನು ಜಾರಿಗೆ ತಂದು ಸುತ್ತೋಲೆಯನ್ನು ಹೊರಡಿಸಲಾಗುವುದು ಅಲ್ಲದೇ ಶುಚಿತ್ವಕ್ಕೆ ಆದ್ಯತೆಯನ್ನು ನೀಡಬೇಕು ಎಂದು ದೇವಾಲಯಗಳ ಅಧಿಕಾರಿಗಳಲ್ಲಿ ಸೂಚನೆ ನೀಡಲಾಗಿದೆ. ಇಲಾಖೆಯನ್ನು ಮತ್ತಷ್ಟು ಸಧೃಢವನ್ನಾಗಿ ಮಾಡಲು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

Comments

comments

Leave a Reply

Read previous post:
OBITUARY: ROSARIO D’SOUZA

ROSARIO D'SOUZA .Bollai,Mogarnad-Bantwal , Husband of Emiliana D'Cunha(Emmie teacher), Father of Rohan Joseph and Renita, passed away on Saturday August 18th 2012....

Close