ಕಿನ್ನಿಗೋಳಿಯಲ್ಲಿ ಚಿತ್ರಕಲಾ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿಯ ಗ್ಲೋಬಲ್ ಕಂಪ್ಯೂಟರ್ ಸಂಸ್ಥೆ ಹಾಗೂ ಕಿನ್ನಿಗೋಳಿ ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಗ್ಲೋಬಲ್ ಕಂಪ್ಯೂಟರ್ ಸಂಸ್ಥೆಯಲ್ಲಿ ನಡೆಯಿತು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಸ್ಪರ್ಧೆಯನ್ನು ಉದ್ಘಾಟಿಸಿ ‘ಮನಸ್ಸಿನ ಕಲ್ಪನೆಗಳಿಗೆ ಗೆರೆಗಳು ಮತ್ತು ಬಣ್ಣಗಳ ಮೂಲಕ ರೂಪ ನೀಡುವ ಚಿತ್ರಕಲೆ ಒಂದು ವಿಶಿಷ್ಟ ಮಾಧ್ಯಮ’ ಎಂದು ಹೇಳಿದರು.
ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಮ್. ಬಾಲಕೃಷ್ಣ ಶೆಟ್ಟಿ, ಕಂಪ್ಯೂಟರ್ ಸಂಸ್ಥೆಯ ಪ್ರಕಾಶ್ ಕೋಟ್ಯಾನ್, ಶೈನಿ ರೆಬೆಲ್ಲೋ, ರೇಷ್ಮಾ ಮತ್ತಿತರರು. ಸುಮಾರು 600 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Comments

comments

Leave a Reply

Read previous post:
ದೇವಾಲಯದ ಪ್ರವಾಸ ನೂತನ ಯೋಜನೆ ಶೀಘ್ರ ಜಾರಿ; ಶ್ರೀನಿವಾಸ ಪೂಜಾರಿ

News by Narendra Kerekadu ಮುಲ್ಕಿ; ರಾಜ್ಯದ ಪ್ರಮುಖ 25ಧಾರ್ಮಿಕ ಕ್ಷೇತ್ರಗಳನ್ನು ವಿಶೇಷವಾಗಿ ಸಂದರ್ಶಿಸುವ ಹಾಗೂ ಅಲ್ಲಿ ಪ್ರವಾಸಿಗರಿಗೆ ಕೊಠಡಿ, ಬಾಲಭವನ, ಕ್ಷೇತ್ರದ ಬಗ್ಗೆ ವಿವರಿಸುವ ಗೈಡ್, ಕ್ಷೇತ್ರದ...

Close