ಕಟೀಲು ಅಭಿವೃದ್ಧಿಗೆ ಸರ್ವ ಸಹಕಾರ: ಮೊಯ್ಲಿ

“ಧಾರ್ಮಿಕತೆಯೊಂದಿಗೆ ಸಾಮಾಜಿಕ ಸಮನ್ವಯತೆಯ ಸಾಧಕ ಗೋಪಾಲಕೃಷ್ಣ ಅವರ ಬದುಕಿನ ಆದರ್ಶಗಳು ಅನುಕರಣೀಯ, ಕಟೀಲು ಕ್ಷೇತ್ರದಿಂದ ನಾನು ಪ್ರಭಾವಿತನಾಗಿದ್ದು ಜೌನ್ನತ್ಯವನ್ನು ಕಂಡಿದ್ದೇನೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಯಾವುದೇ ಪಕ್ಷ-ರಾಜಕೀಯವಿಲ್ಲದೆ ಎಲ್ಲರೂ ಶ್ರದ್ಧಾ ಭಕ್ತಿಪೂರ್ವಕ ಪ್ರಯತ್ನಿಸಬೇಕಾಗಿದೆ” ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಗೋಪಾಲಕೃಷ್ಣ ಆಸ್ರಣ್ಣ ಜನ್ಮಶತಮಾನೋತ್ಸವದ ಸ್ಮಾರಕ ಕಟ್ಟಡ ಹಾಗೂ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ. ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ “ಕಟೀಲು ಕ್ಷೇತ್ರಾಭಿವೃದ್ಧಿಯ ವಿಚಾರ ಬಹಳ ವರ್ಷಗಳಿಂದಲೂ ನನೆಗುದಿಯಲ್ಲೇ ಇದ್ದ ರಸ್ತೆ, ಯಾತ್ರೀ ನಿವಾಸ, ವಸತಿ ಡ್ರೈನೇಜ್ ಬಗ್ಗೆ ಸರಕಾರ ಸೂಕ್ತ ಮುತುವರ್ಜಿ ವಹಿಸಬೇಕಾಗಿದೆ. ಸ್ವಚ್ಛತೆ ಹಾಗೂ ವಾಹನ ನಿಲುಗಡೆಗಳ ಬಗೆಗೂ ವಿಶೇಷ ಕಾಳಜಿ ವಹಿಸಬೇಕಾಗಿದೆ” ಎಂದು ಹೇಳಿದರು. ಶಾಸಕ ಅಭಯಚಂದ್ರ ಜೈನ್ “ಕಟೀಲು ಕ್ಷೇತ್ರದಲ್ಲಿ ರಸ್ತೆ ಯಾತ್ರೀ ನಿವಾಸ ಹಾಗೂ ಡ್ರೈನೇಜ್ ಯೋಜನೆಗಳಿಗೆ ಇಷ್ಟರಲ್ಲೇ ಸರಕಾರದ ಅನುಮೋದನೆ ಪಡೆಯಲಾಗುವುದು” ಎಂದರು. ಇದೇ ಸಂದರ್ಭ ಹಿರಿಯ ಸಹಕಾರಿ ಧುರೀಣ ಬಜಪೆ ವ್ಯವಸಾಯ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಅವರನ್ನು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಸನ್ಮಾನಿಸಿದರು. ಯಕ್ಷಕಲಾ ಕಟೀಲು ವತಿಯಿಂದ ಕಾಟುಕಕ್ಕೆ ರಾಮಕೃಷ್ಣ ಹಾಗೂ ಮೋಹನ ಶೆಟ್ಟಿಗಾರ್ ಮಿಜಾರು ಅವರಿಗೆ ದತ್ತಿ ನಿಧಿ ಸಮರ್ಪಣೆ ಮಾಡಲಾಯಿತು. ಮಾಲತಿ ವಿ. ಮೊಯ್ಲಿ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್, ಕಲ್ಲೂರು ಧಮದರ್ಶಿ ಹರಿಕೃಷ್ಣ ಪುನರೂರು, ಪಟೀಲ್, ವೆಂಕಟೇಶ್ ರಾವ್, ಕೊಡೆತ್ತೂರು ಭುವನಾಭಿರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು. ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸ್ಮಾರಕ ಟ್ರಸ್ಟ್‌ನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಸೌಮ್ಯ ವಂದಿಸಿದರು. ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರಾರ್‌ಗಾಗಿ ಬಯೋಮೆಟ್ರಿಕ್ ಸಂಗ್ರಹಿಸುವ ಹಾಗೂ ನೊಂದಾವಣೆಯ ಕಾರ್ಯಕ್ರಮ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾ...

Close