ತೋಕೂರು ಸೇತುಬಂಧ ಸಮಾರೋಪ

ಕಿನ್ನಿಗೋಳಿ : ಎಂ.ಆರ್.ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ, ತೋಕೂರು ೨೦೧೨-೧೩ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಮೂರು ದಿನಗಳ “ಸೇತುಬಂಧ” ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ಜರಗಿತು.

ಮುಖ್ಯ ಅತಿಥಿಯಾಗಿ ಪಕ್ಷಿಕೆರೆಯ ವೈದ್ಯೆ ಶ್ರೀಮತಿ ಈಶ್ವರೀ ವಿಶ್ವನಾಥ್, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಉತ್ತಮ ತರಬೇತಿ ಪಡೆದು ಭವಿಷ್ಯದಲ್ಲಿ ಸ್ವಾವಲಂಬಿ ಬದುಕನ್ನು ಕಾಣುವ ಅವಕಾಶವನ್ನು ಎಲ್ಲರೂ ಪಡೆದುಕೊಂಡು ತಾವು ಕಲಿಯುವ ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತರಬೇಕು ಎಂದು ಹೇಳಿದರು
ಡಾ| ಸುಧೀರ್ ರಾಜ್, ಪ್ರೋಫೆಸರ್, ಜಸ್ಟೀಸ್ ಕೆ.ಸೆ.ಹೆಗ್ಡೆ ಇಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್, ನಿಟ್ಟೆ “ವಿದ್ಯಾರ್ಥಿ ಪರಿಣಾಮಕಾರಿತ್ವ” ದ ಬಗ್ಗೆ ಉಪನ್ಯಾಸ ನೀಡಿದರು. ತರಬೇತಿ ಅಧಿಕಾರಿ ರಘುರಾಮ್ ರಾವ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ವೈ.ಎನ್.ಸಾಲಿಯನ್ ಸ್ವಾಗತಿಸಿ. ಗುರುರಾಜ ಭಟ್ ವಂದಿಸಿದರು. ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಚಿತ್ರಕಲಾ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿಯ ಗ್ಲೋಬಲ್ ಕಂಪ್ಯೂಟರ್ ಸಂಸ್ಥೆ ಹಾಗೂ ಕಿನ್ನಿಗೋಳಿ ರೋಟರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಶನಿವಾರದಂದು ಶಾಲಾ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಗ್ಲೋಬಲ್ ಕಂಪ್ಯೂಟರ್ ಸಂಸ್ಥೆಯಲ್ಲಿ...

Close