ಮೂಲ್ಕಿ ಬಿಲ್ಲವ ಸಂಘ ಅಧ್ಯಕ್ಷರಾಗಿ ಯದೀಶ್ ಅಮೀನ್ ಕೊಕ್ಕರಕಲ್ ಆಯ್ಕೆ

Photo by: Bhagyavan Sanil

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ 2012-14 ನೇ ಸಾಲಿನ ಅಧ್ಯಕ್ಷರಾಗಿ ಯದೀಶ್ ಅಮೀನ್ ಕೊಕ್ಕರಕಲ್ ಆಯ್ಕೆಯಾಗಿದ್ದಾರೆ.
ಪ್ರಗತಿಶೀಲ ಕೃಷಿಕರು,ಸಮಾಜ ಸೇವಾಸಕ್ತರೂ, ವಾಸ್ತು ತಜ್ಞರಾದ ಇವರು ಮೂರ್ತೆದಾರ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಮೂಲ್ಕಿ ವಿಜಯಾ ರೈತ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಪಿ.ಸಾಲ್ಯಾನ್, ಹಾಗೂ ಪಯ್ಯೋಟ್ಟು ರತ್ನಾಕರ ಸಾಲ್ಯಾನ್, ಗೌ.ಕಾರ್ಯದರ್ಶಿಯಾಗಿ ಗೋಪೀನಾಥ ಪಡಂಗ, ಸ.ಕಾರ್ಯದರ್ಶಿ ವಾಮನ ಕೋಟ್ಯಾನ್ ನಡಿಕುದ್ರು, ಕೋಶಾಧಿಕಾರಿ ಉದಯ ಅಮೀನ್ ಮಟ್ಟು,  ಸ.ಕೋಶಾಧಿಕಾರಿ ವೇದವ್ಯಾಸ ಬಂಗೇರಾ ಅಯ್ಕೆಯಾಗಿರುತ್ತಾರೆ.

 

Comments

comments

Leave a Reply

Read previous post:
ಕಟೀಲು ಅಭಿವೃದ್ಧಿಗೆ ಸರ್ವ ಸಹಕಾರ: ಮೊಯ್ಲಿ

"ಧಾರ್ಮಿಕತೆಯೊಂದಿಗೆ ಸಾಮಾಜಿಕ ಸಮನ್ವಯತೆಯ ಸಾಧಕ ಗೋಪಾಲಕೃಷ್ಣ ಅವರ ಬದುಕಿನ ಆದರ್ಶಗಳು ಅನುಕರಣೀಯ, ಕಟೀಲು ಕ್ಷೇತ್ರದಿಂದ ನಾನು ಪ್ರಭಾವಿತನಾಗಿದ್ದು ಜೌನ್ನತ್ಯವನ್ನು ಕಂಡಿದ್ದೇನೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಯಾವುದೇ...

Close