ಉಲ್ಲಂಜೆಯಲ್ಲಿ ಬಸ್ಸು ಮಗುಚಿ 24 ಜನರಿಗೆ ಗಾಯ

ಕಿನ್ನಿಗೋಳಿ : ಶುಕ್ರವಾರ ಮಧ್ಯಾಹ್ನ  11.45 ಗಂಟೆಗೆ ಮುಲ್ಕಿಯಿಂದ ಕಿನ್ನಿಗೋಳಿಗಾಗಿ ಕಟೀಲಿಗೆ ಸಂಚರಿಸುವ ಖಾಸಗಿ ಬಸ್ಸು ಚಂದನ, ಕಿನ್ನಿಗೋಳಿ ಸಮೀಪದ ಚಂದ್ರ ಮಂಡಲ ಉಲ್ಲಂಜೆಯ ತಿರುವಿನಲ್ಲಿ ಕಾರಿಗೆ ಸೈಡ್ ಕೊಡುವ ಭರದಲ್ಲಿ ಪಲ್ಟಿಯಾಗಿ ಸುಮಾರು 24 ಮಂದಿ ಗಾಯಾಗೊಂಡಿದ್ದಾರೆ.

ಶ್ರಾವಣ ಶುಕ್ರವಾರ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಕಟೀಲು ದೇವಳಕ್ಕೆ ಜನರು ಬರುತಿದ್ದು ಹೆಚ್ಚಿನ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು. ನತದೃಷ್ಟ ಬಸ್ಸು ಕೂಡಾ ತುಂಬಿ ತುಳುಕುತ್ತಿದ್ದು ಸೈಡ್ ಕೊಡುವ ಭರದಲ್ಲಿ ರಸ್ತೆ ಬದಿಯ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಬಸ್ಸಿನ ಅಡಿಯಲ್ಲಿ ದಯಾನಂದ ಕೆರೆಕಾಡು ಎಂಬವರು ಸಿಲುಕಿದ್ದು ಅವರನ್ನು ಸಾರ್ವಜನಿಕರ ಸಹಾಯದಿಂದ ಮೇಲಕ್ಕೆತ್ತಿ ಮುಕ್ಕದ ಶ್ರೀನಿವಾಸ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಪರಿಸರದ ನಾಗರೀಕರು, ಜನಪ್ರತಿನಿಧಿಗಳು ಸಹಾಯಕ್ಕೆ ಬಂದು ತ್ವರಿತಗತಿಯಿಂದ ಗಾಯಾಳುಗಳನ್ನು ಸಮೀಪದ ಕೊನ್ಸೆಟ್ಟಾ ಆಸ್ಪತ್ರೆಗೆ ದಾಖಲಿಸಿದರು. ಅಪಘಾತದಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.

11 ತಿಂಗಳ ಮಗು ನಿರೀಕ್ಷಾ ಪವಾಡ ಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾಳೆ.

ಆಸ್ಪತ್ರೆಯಲ್ಲಿ 21 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದರು ಹಾಗೂ 3 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ.
ಅಪಘಾತದಲ್ಲಿ ಆಶಾ ಅಂಬಲಪಾಡಿ, ಗೋವಿಂದ ಆಚಾರ್ಯ ಉಡುಪಿ, ಶಾರದಾ ಉಡುಪಿ, ಅಶೋಕ್ ಉಚ್ಚಿಲ, ಧೀರೇಶ್ ಮೂಳೂರು, ಉಷಾ, ಅಭಿನಯ ಹಿರಿಯಡಕ, ತಿಲೋತ್ತಮೆ, ಕಲಾವತಿ ಕಾಪು, ಸುನಂದ ಪರ್ಕಳ, ವಿಮಲ, ರುಕ್ಮಿಣಿ ಹೆಜಮಾಡಿ, ಸರಿತಾ ಮೂಲ್ಕಿ, ವನಿತಾ ಪಡುಬಿದ್ರಿ, ನಾರಾಯಣ ಕೆಮ್ತೂರು ಉದ್ಯಾವರ, ರಮೇಶ್, ಪೂರ್ಣಿಮಾ ಚೇಳ್ಯಾರು, ಮೀನಾಕ್ಷಿ, ದೀಪಾ, ಅಂಗರಗುಡ್ಡೆ, ಅಮೃತಾ, ಶಕುಂತಲಾ ವಾಮನ ನಾಯಕ್ ಗಾಯ ಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಅಪಘಾತದಲ್ಲಿ ಪ್ರಾಮಾಣಿಕತೆ ಮೆರೆದ ಸಹೃದಯಿ
ಗಾಯಾಳು ಮಹಿಳಾ ಪ್ರಯಾಣಿಕ ಒರ್ವರ ಮುತ್ತಿನ ಸರವೊಂದು ಅಪಘಾತ ಸ್ಥಳದಲ್ಲಿ ಕಳೆದಿದ್ದು ಸಹದೃಯಿ ಒರ್ವರು ಆ ಸರವನ್ನು ಆಸ್ಪತ್ರೆಗೆ ಬಂದು ಆ ಮಹಿಳೆಗೆ ಹಿಂತಿರುಗಿಸಿ ಎಲ್ಲರ ಪ್ರಂಶಂಸೆಗೆ ಪಾತ್ರರಾದರು.

 

Comments

comments

Leave a Reply

Read previous post:
ಕರ್ನಿರೆ ಶಾಲೆಯಲ್ಲಿ ಸೈಕಲ್ ವಿತರಣೆ

ಕಿನ್ನಿಗೋಳಿ : ಗುರುವಾರ ಕರ್ನಿರೆ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪೋಷಕರ ಸಮ್ಮುಖದಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಶಾಸಕರಾದ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ನೆಲ್ಸನ್ ಲೋಬೊ, ಟಿ.ಎಚ್.ಮಯ್ಯದ್ದಿ, ಶೇಷರಾಮ...

Close