ಮುಂಡ್ಕ್ಕೂರು ಭಾರ್ಗವ ಜೇ.ಸಿ.ಸ್ ಗೆ ವಲಯಾಧ್ಯಕ್ಷರ ಭೇಟಿ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ನಿಸ್ವಾರ್ಥವಾಗಿ ತಮ್ಮನ್ನು ಸಮಾಜದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆಯಿದೆ ಎಂದು ವಲಯ ಜೇ.ಸಿ. 15ರ ವಲಯಾಧ್ಯಕ್ಷ ಅಲನ್ ರೋಹನ್ ವಾಸ್ ಜೇ.ಸಿ.ಐ ಮುಂಡ್ಕೂರು ಭಾರ್ಗವದ ಅಧಿಕೃತ ಭೇಟಿ ಸಂದರ್ಭ ಹೇಳಿದರು.
ಕಡಂದಲೆ ವಿದ್ಯಾಗಿರಿ ಹಿರಿಯ ಪ್ರಾಥಮಿಕ ಶಾಲೆಗೆ ದ್ವಜಸ್ತಂಭ, ಜೋಡು ಕಟ್ಟೆ ದೊಂಬದ ಬಳಿ ಉತ್ಸವಸಮಿತಿಗೆ ಕಾಣಿಕೆ ಹುಂಡಿ ಹಾಗೂ ಬೊಮ್ಮಯಿಲಚ್ಚಿಲ್ ಯಶಸ್ವಿ ಪ್ರೆಂಡ್ಸ್‌ನ ಕಛೇರಿ ನಿರ್ಮಾಣಕ್ಕೆ ಧನ ಸಹಾಯ ಹಾಗೂ ಕೊಡುಗೆಗಳನ್ನು ನೀಡಲಾಯಿತು.
ಶಿಕ್ಷಕ ಭರತ್ ನಾಯ್ಕ್ , ಸಮಾಜ ಸೇವಕ ಗುಣಪಾಲ್ ಹಾಗೂ ವಲಯಾಧ್ಯಕ್ಷ ಅಲನ್ ರೋಹನ್ ವಾಸ್ ಅವರನ್ನು ಸನ್ಮಾನಿಸಲಾಯಿತು. ಭಾರ್ಗವ ಜೇಸಿಸ್‌ನ ಅಧ್ಯಕ್ಷ ಸುರೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದು, ನಿಕಟ ಪೂರ್ವ ಅಧ್ಯಕ್ಷ ಸುಧಾಕರ ಪೊಸ್ರ್ರಾಲ್ ಜೇಸಿರೆಟ್ ಅಧ್ಯಕ್ಷೆ ಪ್ರೇಮ ಪಿ. ಶೆಟ್ಟಿ, ಕಿರಣ್ ಕುಮಾರ್, ಉದಯ ಕುಮಾರ್ ಉಪಸ್ಥಿತರಿದ್ದರು.

 

Comments

comments

Leave a Reply

Read previous post:
NEED OF COMPUTER EDUCATION IN TODAY’S WORLD!!

Article by Shynee D’souza We live in a fast-moving world where almost everything must come instantly to us. In this computer...

Close