ಕಟೀಲು ಪರಿಸರದಲ್ಲಿ ನೆರೆ

ಕಿನ್ನಿಗೋಳಿ : ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಜಡಿ ಮಳೆಗೆ ಕಟೀಲು ಪರಿಸರದಲ್ಲಿ ಭಾನುವಾರ ಬೆಳಿಗ್ಗಿನಿಂದ ಶಾಂಭವಿ ನದಿ ತುಂಬಿ ತುಳುಕಿ ನೆರೆಯ ವಾತಾವರಣ ಸೃಷ್ಥಿಯಾಗಿದೆ. ಕಟೀಲು ಜಳಕದ ಕಟ್ಟೆ ಬಳಿ ಕಟೀಲು-ನಿಡ್ಡೋಡಿ ದಾರಿ ಹಾಗೂ ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.
ಕಟೀಲು ದೇವಳಕ್ಕೆ ಖಾಸಗಿ ಸಂಸ್ಥೆಯೊಂದು ಟರ್ಬೋ ತಂತ್ರಜ್ಞಾನ ಬಳಸಿ ಕೇವಲ ಐದಾರು ಲಕ್ಷ ರೂ.ನಲ್ಲಿ ಇಪ್ಪತ್ತೈದು ಕಿಲೋ ವಾಟ್ ವಿದ್ಯುತನ್ನು ಕಟೀಲು ನಂದಿನಿ ನದಿಯಿಂದ ಉತ್ಪಾದಿಸುವ ಯೋಜನೆ ಜೂನ್‌ನಲ್ಲಿ ಹಮ್ಮಿಕೊಂಡಿತ್ತು. ಈಗ ಟರ್ಬೋ ಯಂತ್ರ ಉತ್ಪಾದಿಸುವ ಮೊದಲೇ ಎರಡನೇ ಸಾರಿ ನೆರೆ ನೀರಿನಲ್ಲಿ ಮುಳುಗಡೆಯಾಗಿದೆ. ಕಟೀಲು ಸೇತುವೆಯ ಬಳಿ ಮೆನ್ನಬೆಟ್ಟು ಪಂಚಾಯಿತಿಯ ಕುಡಿಯುವ ನೀರಿನ ಯೋಜನೆಯ ಭಾವಿ ಮುಳುಗಡೆ ಭೀತಿಯಲ್ಲಿದೆ.

Comments

comments

Leave a Reply

Read previous post:
ಕಿನ್ನಿಗೋಳಿ ಗಣೇಶೋತ್ಸವ ಸಮಿತಿಯ 2012-14 ನೇ ಸಾಲಿನ ಪದಾಧಿಕಾರಿಗಳು

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ಸಾರ್ವಜನಿಕ ಗಣೇಶೋತ್ಸವದ 2012-14 ನೇ ಸಾಲಿನ ಸಮಿತಿ ಅಧ್ಯಕ್ಷರಾಗಿ ಕೆ.ಬಿ.ಸುರೇಶ್ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷ ನಾರಾಯಣ ಸಿ.ಎ.ಸಿ, ಪರಮೇಶ್ವರ ಶೆಟ್ಟಿಗಾರ್, ಗಿರಿಯಪ್ಪ ದೇವಾಡಿಗ, ಕಾರ್ಯದರ್ಶಿ...

Close