ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣಾ ಕಾರ್ಯಕ್ರಮ ಭಾನುವಾರ ಕಿನ್ನಿಗೋಳಿ ರೋಟರಿ , ರೋಟರಾಕ್ಟ್ ಕ್ಟ್, ಲಯನ್ಸ್, ಇನ್ನರ್ ವೀಲ್, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ, ಯುಗಪುರುಷ ಕಿನ್ನಿಗೋಳಿ ಸಂಸ್ಥೆಗಳ ಆಶ್ರಯದಲ್ಲಿ ಹಾಗೂ ಮಂಗಳೂರು ಹಿರಿಯ ನಾಗರಿಕರ ಸಂಘದ ಸಹಯೋಗದೊಂದಿಗೆ ಕಿನ್ನಿಗೋಳಿಯ ಕೊನ್ಸೆಟ್ಟಾ ಆಸ್ಪತ್ರೆಯಲ್ಲಿ ನಡೆಯಿತು.
ಕೊನ್ಸೆಟ್ಟಾ ಆಸ್ಪತ್ರೆಯ ಭಗಿನಿ ಡಾ| ಜೀವಿತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಕೆ ರಮೇಶ್ “ಇಂದಿನ ಸಮಾಜದಲ್ಲಿ ತಂದೆ ಮಕ್ಕಳ ಸಂಬಂಧದ ಅಂತರ ಹೆಚ್ಚಾಗುತ್ತಿದೆ. ಪ್ರೀತಿ ವಿಶ್ವಾಸದ ಬಾಳನ್ನು ಮುನ್ನಡೆಸುವುದು ನಮ್ಮ ಆದ್ಯ ಕರ್ತವ್ಯ” ಎಂದು ಹೇಳಿದರು.
ಇನ್ನರ್ ವೀಲ್ ಅಧ್ಯಕ್ಷೆ ಮಮತಾ ಶೆಟ್ಟಿ , ಲಯನ್ಸ್ ಕ್ಲಬ್ ಅಧ್ಯಕ್ಷ ಭುಜಂಗ ಬಂಜನ್, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಅಧ್ಯಕ್ಷ ರಫಾಯಲ್ ರೆಬೆಲ್ಲೊ, ಮಂಗಳೂರು ಹಿರಿಯ ನಾಗರಿಕರ ಸಂಘದ ಖಜಾಂಜಿ ಜಿ.ಜಿ. ಕಿಣಿ, ಪೀಟರ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಹೆರಿಕ್ ಪಾಯಸ್ ನಿರೂಪಿಸಿದರು. ರೋಟರಾಕ್ಟ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ ವಂದಿಸಿದರು.

Comments

comments

Leave a Reply

Read previous post:
ಕುಕ್ಕಟ್ಟೆ ಕೊಲ್ಲೂರು ಸ.ಹಿ.ಪ್ರಾ. ಶಾಲೆ ಗ್ರಾಮೀಣ ಕ್ರೀಡಾಂಗಣ

ಕುಕ್ಕಟ್ಟೆ ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣಕ್ಕೆ ಗ್ರಾಮೀಣ ಕ್ರೀಡಾಂಗಣ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ದೊರಕಿದ್ದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ...

Close