ಕುಕ್ಕಟ್ಟೆ ಕೊಲ್ಲೂರು ಸ.ಹಿ.ಪ್ರಾ. ಶಾಲೆ ಗ್ರಾಮೀಣ ಕ್ರೀಡಾಂಗಣ

ಕುಕ್ಕಟ್ಟೆ ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣಕ್ಕೆ ಗ್ರಾಮೀಣ ಕ್ರೀಡಾಂಗಣ ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ದೊರಕಿದ್ದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಅವರು ಶುಕ್ರವಾರ ಗುದ್ದಲಿ ಪೂಜೆ ನಡೆಸುವ ಮೂಲಕ ಚಾಲನೆ ನೀಡಿದರು. ಬಳ್ಕುಂಜೆ ಪಂಚಾಯಿತಿ ಅಧ್ಯಕ್ಷೆ ಗೀತಾ ಅಮೀನ್, ಶಾಲಾ ಮುಖ್ಯೋಪಾಧ್ಯಾಯಿನಿ ಸುವಾಸಿನಿ, ಶಾಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ರಾಜು ಸಾಲ್ಯಾನ್, ಉಪಾಧ್ಯಕ್ಷೆ ಪ್ರೇಮಾ, ಎಲ್ಲಪ್ಪ ಟಿ. ಸಾಲ್ಯಾನ್, ಗಂಗಾಧರ ಪೂಜಾರಿ, ಆನಂದ, ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲು : ಕುರಲ್ ಇಷ್ಟೆರ್ ಕುಡ್ಲ 20ನೇ ವರ್ಷಾಚರಣೆ

Photo by Bhagyavan Sanil ಕಟೀಲು :ಸಂಸ್ಕೃತಿ ಮತ್ತು ಸಂಸ್ಕಾರದ ಅಭಿವೃದ್ಧಿಗೆ ಮಾತೃಭಾಷೆಯಿಂದ ನಡೆಸುವ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಾಗಲಿದ್ದು ತುಳು ಸಾಹಿತ್ಯ ಅಕಾಡಮಿ ಕುರಲ್ ಇಷ್ಟೆರ್ ನಂತಹ...

Close