ಕಟೀಲು : ಕುರಲ್ ಇಷ್ಟೆರ್ ಕುಡ್ಲ 20ನೇ ವರ್ಷಾಚರಣೆ

Photo by Bhagyavan Sanil

ಕಟೀಲು :ಸಂಸ್ಕೃತಿ ಮತ್ತು ಸಂಸ್ಕಾರದ ಅಭಿವೃದ್ಧಿಗೆ ಮಾತೃಭಾಷೆಯಿಂದ ನಡೆಸುವ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಾಗಲಿದ್ದು ತುಳು ಸಾಹಿತ್ಯ ಅಕಾಡಮಿ ಕುರಲ್ ಇಷ್ಟೆರ್ ನಂತಹ ಹತ್ತು ಹಲವು ಸಂಸ್ಥೆಗಳನ್ನು ಹುಟ್ಟುಹಾಕಿ ಭಾಷೆಯ ಅಭಿವೃದ್ಧಿ ಮಾಡಬೇಕು ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಎಂ.ಆರ್.ವಾಸುದೇವ ಹೇಳಿದರು.

ಕಟೀಲು ಶ್ರೀದುರ್ಗಾಪರಮಶ್ವರೀ ದೇವಳದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಎಕಾಡಮಿ ಮತ್ತು ವಿಜಯ ಯುವ ಸಂಗಮ ಎಕ್ಕಾರು ಇವರ ಸಂಯೋಜನೆಯಲ್ಲಿ ಕುರಲ್ ಇಷ್ಟೆರ್ ಕುಡ್ಲ ಇವರ 20ನೇ ವರ್ಷಾಚರಣೆಯ ಪ್ರಯುಕ್ತ ಏಳು ದಿನಗಳ ತುಳು ತಾಳಮದ್ದಲೆ ಸ್ಪರ್ದೆ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವೇ.ಮು.ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಿದರು.ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಕಟೀಲು ದೇವಳದ ಆಡಳಿತಾಧಿಕಾರಿ ಡಾ.ಹರೀಶ್ ಕುಮಾರ್ ಚೆಂಡೆ ಬಾರಿಸಿ ಸ್ಪರ್ದಿಗಳಿಗೆ ಎಲೆಅಡಿಕೆ ಬೂಲ್ಯ ನೀಡುವ ಮೂಲಕ ಸ್ಪರ್ದೆಗೆ ಚಾಲನೆ ನೀಡಿ ಮಾತಾಡಿದ ಅವರು ಇಂದು ಸಂಸ್ಕೃತಿ ಅಥವಾ ಭಾಷಾ ಉನ್ನತಿ ಕಾರ್ಯಕ್ರಮಗಳಲ್ಲಿ ಹಿರಿಯ ತಲೆಗಳೇ ಕಾಣಿಸುತ್ತಿದ್ದು ಯುವ ಪೀಳಿಗೆ ವಿಮುಖರಾಗಿದ್ದಾರೆ ಆದುದರಿಂದ ಯುವ ಪೀಳಿಗೆ ಆಕರ್ಷಿತರಾಗುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಬಹಳ ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಎಕಾಡಮಿ ಅಧ್ಯಕ್ಷರಾದ ಉಮಾನಾಥ ಕೋಟ್ಯಾನ್ ವಹಿಸಿದ್ದರು.
ಅತಿಥಿಗಳಾಗಿ ಬಜ್ಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ,ವಿಜಯ ಯುವ ಸಂಗಮದ ಗೌ.ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ವೇದಿಕೆಯಲ್ಲಿದ್ದರು.

ಕಟೀಲು ಮಕ್ಕಳ ಮೇಳದ ಬಾಲಕಲಾವಿದರು ತುಳು ಯಕ್ಷಗಾನ ಪದ್ಯದ ಮೂಲಕ ಪ್ರಾರ್ಥನೆ ಹಾಡಿದರು.ಕುರಲ್ ಇಷ್ಟೆರ್ ಕುಡ್ಲ ಅಧ್ಯಕ್ಷ ವಾಮನ ಕರ್ಕೇರ ಕೊಲ್ಲೂರು ಸ್ವಾಗತಿಸಿದರು.ಕುರಲ್ ಇಷ್ಟೆರ್ ಸದಸ್ಯ ವಿ.ಕೆ.ಯಾದವ್ ಪ್ರಸ್ತಾವಿಸಿದರು.ರಾಮದಾಸ್ ಪಾವಂಜೆ ನಿರೂಪಿಸಿದರು. ನಿತೇಶ್ ವಂದಿಸಿದರು.

Comments

comments

Leave a Reply

Read previous post:
OBITUARY : Felix Noronha

Felix  Noronha  (Aged 69 yrs)  husband of   Stella Noronha father of  Joyer Rudolph/ Lydia,  Veera Joyce/Lawrance grandfather of  Layona, Armaan, Lonell...

Close