ಪಂಜ ಉಲ್ಯದಲ್ಲಿ ಅತೀವೃಷ್ಟಿ ?!?

ಕಿನ್ನಿಗೋಳಿ : ಕಳೆದ ಇಪ್ಪತ್ತಾಲ್ಕು ಗಂಟೆಗಳಿಂದ ಪಂಜ ಉಲ್ಯದ ಜನರು ನೆರೆಯಿಂದಾಗಿ ದಿಗ್ಬಂಧನಗೊಳಗಾಗಿದ್ದಾರೆ. ನೆರೆ ಇನ್ನೂ ಇಳಿಯದೆ ಜನರು ಸಂಕಷ್ಟ ಪಡುವಂತಾಗಿದೆ. ಎರಡು ವಾರ ಮೊದಲು ಸುರಿದ ಮಳೆಗೆ ಉಲ್ಯದಲ್ಲಿ ನಂದಿನಿ ತಡೆಗೋಡೆ ಕುಸಿದ್ದಿದ್ದು ಈಗ ನೆರೆಯಿಂದಾಗಿ ಪರಿಸ್ಥಿತಿ ವಿಷಮವಾಗುವ ಸೂಚನೆಗಳು ಕಾಣುತ್ತಿವೆ. ಪಂಜದಿಂದ ಚೇಳ್ಯಾರು ಮಧ್ಯಕ್ಕೆ ಹೋಗುವ ರಸ್ತೆ ಇನ್ನೂ ಮುಳುಗಡೆಯಲ್ಲಿದೆ. ರಸ್ತೆಗಳು ಕಡಿದು ಹೋಗಿವೆ. ದೋಣಿಯಲ್ಲಿ ಸಾಗುವ ಪರಿಸ್ಥಿತಿ ಎಳೆಯ ಶಾಲಾ ಮಕ್ಕಳಿಗೆ ಬಂದಿದೆ.
ಪಂಜ, ಕೊಕುಡೆ ಮತ್ತು ಉಲ್ಯದಲ್ಲಿ ಸುಮಾರು ೨೦೦ ಎಕರೆ ಕೃಷಿ ಭೂಮಿ, ತೋಟ, ಬೆಳೆಗಳು ಈಗಾಗಲೇ ಹಾನಿಗೀಡಾಗಿವೆ. ಈ ಸ್ಥಿತಿ ಜನರ ನೆಮ್ಮದಿ ಕೆಡಿಸಿದೆ.
ಉಲ್ಯ ಲಕ್ಷ್ಮೀ ಪೂಜಾರಿ, ನೀಲಾಧರ ಕೋಟ್ಯಾನ್, ಕೇಶವ ಕೋಟ್ಯಾನ್, ಸುಂದರ ಪೂಜಾರಿ ಸಾನದ ಮನೆ, ಪಂಜ ಉಮನಾಥ ಶೆಟ್ಟಿ, ಸತೀಶ್ ಎಮ್. ಶೆಟ್ಟಿ ಬೈಲಗುತ್ತು, ಪಂಜ ಪದ್ಮನಾಭ ಪೂಜಾರಿ, ಚಂದ್ರಹಾಸ ಭಂಡಾರಿ, ಪಂಜ ಜಗನ್ನಾಥ ದೇವಾಡಿಗ, ಅಂಗಡಿಗುತ್ತು ರಘುನಾಥ ಶೆಟ್ಟಿ, ಪಂಜದ ಗುತ್ತು ಸತೀಶ ಜೆ. ಶೆಟ್ಟಿ ಅವರ ಕೃಷಿ ಬೆಳೆಗಳು ಸಂಪೂರ್ಣ ಮುಳುಗಡೆ ಹೊಂದಿದ್ದು ಅಪಾರ ಹಾನಿಯಾಗುವ ಸಂಭವವಿದೆ.

Comments

comments

Leave a Reply

Read previous post:
ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣೆ

ಕಿನ್ನಿಗೋಳಿ: ಹಿರಿಯ ನಾಗರಿಕರಿಗೆ ಗುರುತು ಚೀಟಿ ವಿತರಣಾ ಕಾರ್ಯಕ್ರಮ ಭಾನುವಾರ ಕಿನ್ನಿಗೋಳಿ ರೋಟರಿ , ರೋಟರಾಕ್ಟ್ ಕ್ಟ್, ಲಯನ್ಸ್, ಇನ್ನರ್ ವೀಲ್, ಸೌತ್ ಕೆನರಾ ಫೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ,...

Close