ಕಿಲ್ಪಾಡಿ ಬಂಡಸಾಲೆ ಪ್ರದೇಶದಲ್ಲಿ ಕೃತಕ ನೆರೆ

Bhagyavan Sanil
ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡಸಾಲೆ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 48 ಲಕ್ಷರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಿಂಡಿ ಆಣೆಕಟ್ಟು ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ  ಕೃತಕ ನೆರೆ ಸೃಷ್ಟಿಯಾಗಿ  ಬಂಡಸಾಲೆ ಪ್ರದೇಶ ಜಲಾವೃತವಾಗಿದೆ.
ಮಾನಂಪಾಡಿ ಸೇತುವೆ ಬಳಿ ಯೋಜಿಸಲಾಗಿದ್ದ ಈ ಯೊಜನೆಯು ತಗ್ಗು ಪ್ರದೇಶವಾದ ಬಂಡಸಾಲೆಯಲ್ಲಿ ನಿರ್ಮಾಣವಾಗಿದ್ದು ಮಾತ್ರವಲ್ಲ ಆಣೆಕಟ್ಟನ್ನು ಬಹಳ ತಗ್ಗಾಗಿ ನಿರ್ಮಿಸಿರುವುದರಿಂದ ನೀರಿನ ಹರಿವಿಗೆ ತಡೆ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಿಸದೆ ಇರುವುದು ಈ ಎಲ್ಲಾ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಸುಮಾರು 50  ಎಕ್ರೆಯಷ್ಟು ಬತ್ತದ ಗದ್ದೆಗಳು ಮತ್ತು ಸ್ಥಳಿಯರ ಮನೆಗಳು ಜಲಾವೃತವಾಗಿದ್ದು ಸಂಚಾರಕ್ಕೆ ದೋಣಿಯನ್ನು ಅವಲಂಭಿಸುವ ಪರಿಸ್ಥಿತಿ ಎದುರಾಗಿದೆ. ಸ್ಥಳಿಯರಾದ ನಾರಾಯಣ ಶೆಟ್ಟಿ, ಅಂಬರೀಶ ಶೆಟ್ಟಿ, ಗೋಪೀನಾಥ ಪಡಂಗ ,ಮೀನಾಕ್ಷಿ ಶೆಟ್ಟಿ, ವಿಠಲ ಶೆಟ್ಟಿ, ಮತ್ತಿತರರ ಜಮೀನಿನಲ್ಲಿ ನೀರು ಹರಿಯುತ್ತಿರುವುದರಿಂದ ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.

ಈ ಬಗ್ಗೆ ಕಿಲ್ಪಾಡಿ ಪಂಚಾಯತಿಗೆ ಆಣೆಕಟ್ಟು ಪ್ರಾರಂಭದ ಹಂತದಲ್ಲಿ ದೂರು ನೀಡಿದ್ದು ಪಂಚಾಯತ್ ಇದನ್ನು ನಿರ್ಲಕ್ಷಿಸಿದ ಪರಿಣಾಮ ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈಬಗ್ಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಸ್ಥಳಿಯರ ಆಗ್ರಹವಾಗಿದೆ.
ಕಿಂಡಿ ಆಣೆಕಟ್ಟು ಕಾಮಗಾರಿ ಕಳಪೆ ಹಾಗೂ ಸರಿಯಾಗಿ ತಡೆಗೋಡೆ ನಿರ್ಮಿಸದ ಕಾರಣ ಈ ಸಮಸ್ಯೆ ಎದುರಾಗಿದ್ದು ಈ ಬಗ್ಗೆ ಸಣ್ಣ ನೀರಾವರಿ ಇಂಜಿನಿಯರ್ ದೇವೀ ಪ್ರಸಾದ್ ರವರಿಗೆ ಪಂಚಾಯತ್ ಲಿಖಿತ ದೂರು ಸಲ್ಲಿಸಿದೆ.

Comments

comments

Leave a Reply

Read previous post:
ಐಕಳ ಶಾಲೆಯಲ್ಲಿ ಸೈಕಲ್ ವಿತರಣೆ

Lionel Pinto ಕಿನ್ನಿಗೋಳಿ : ಐಕಳ ಸರಕಾರಿ ಶಾಲೆಯಲ್ಲಿ ಮಂಗಳವಾರ ಶಾಸಕ ಅಭಯ ಚಂದ್ರ ಜೈನ್ 8ನೇ ತರಗತಿಯ 6 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು. ಜಿ.ಪಂ.ಸದಸ್ಯೆ ಆಶಾ ರತ್ನಾಕರ ಸುವರ್ಣ, ಐಕಳ...

Close