ಕಿನ್ನಿಗೋಳಿಯಲ್ಲಿ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ : ಕರಾವಳಿಯ ಯುವ ಗಾಯಕ-ಗಾಯಕಿಯರಿಗಾಗಿ ಜನನಿ ಮೆಲೋಡಿಸ್ ಕಿನ್ನಿಗೋಳಿ ಆಯೋಜಿಸಿದ ಕರೋಕೆ ಗಾಯನ ಸ್ಪರ್ಧೆಯು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಾನುವಾರ ನಡೆಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ಯುವ ಪ್ರತಿಭೆಗಳಿಗೆ ಸ್ಪೂರ್ತಿ ಹಾಗೂ ಉತ್ತಮ ಚಾರಿತ್ರ್ಯದ ಶಿಕ್ಷಣ ನೀಡಿ, ಭವಿಷ್ಯದ ಉತ್ತಮ ಪ್ರಜೆಗಳಾಗಿ ಮೂಡಿಸುವ ವೇದಿಕೆಯಾಗಬೇಕು ಎಂದು ಹೇಳಿದರು.
ಉದ್ಯಮಿ ಪಿ. ಸತೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಗಾಯಕಿ ಸೌಮ್ಯ ಭಟ್, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಸಂತಾನ್ ಡಿ’ಸೋಜ, ಮಾಧವ ಬಂಗೇರ, ಮಾಜಿ ಸದಸ್ಯ ಪ್ರಕಾಶ್ ಹೆಗ್ಡೆ ಎಳತ್ತೂರು, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ರಾಜೇಶ್ ಕೆಂಚನಕೆರೆ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಮತಾ ಶೆಟ್ಟಿ, ಕೋಳಿ ನೃತ್ಯಗಾರ ಹಾಗೂ ಮುಖವಾಡ ತಯಾರಕ ಅಶೋಕ್ ಪೊಳಲಿ ಉಪಸ್ಥಿತರಿದ್ದರು. ದಿನೇಶ್ ಕೊಡೆತ್ತೂರು ಪ್ರಾರ್ಥಿಸಿ, ಪ್ರಕಾಶ್ ಆಚಾರ್ಯ ಸ್ವಾಗತಿಸಿ, ವಂದಿಸಿದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪದ್ಮನೂರಿನಲ್ಲಿ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪದ್ಮನೂರು ಎಂಬಲ್ಲಿ ಸೋಮವಾರ ರಾತ್ರಿ ಸುರಿದ ಮಳೆ ಗಾಳಿಗೆ ರಸ್ತೆಯ ಮೇಲೆ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ...

Close