ಮೆನ್ನಬೆಟ್ಟು ಹಸಿರು ಹುಲ್ಲು ನಾಟಿ ಬಗ್ಗೆ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿನ್ನಿಗೋಳಿ ವಲಯದ ಮೆನ್ನಬೆಟ್ಟು ಕಾರ್ಯಕ್ಷೇತ್ರದ ಸಾವಯವ ಗ್ರಾಮ-ಸ್ಥಳ ಯೋಜನೆಯಡಿ ಹಸಿರು ಹುಲ್ಲು ವಿತರಣೆ ಮತ್ತು ನಾಟಿ ಬಗ್ಗೆ ಪ್ರಾತ್ಯಕ್ಷಿಕೆ, ಪಲ್ಲದ ಬೆಟ್ಟು ಕೊಡೆತ್ತೂರು ಗಿರಿಯಪ್ಪರವರ ತೋಟದಲ್ಲಿ ನಡೆಯಿತು. ಭುವನಾಭಿರಾಮ ಉಡುಪ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿದರು. ಯೋಜನೆಯ ಕೃಷಿ ಮೇಲ್ವಿಚಾರಕ ಜನಾರ್ದನ.ಎಂ ಹಸಿರು ಹುಲ್ಲು ನೆಡುವ ವಿಧಾನ ಮತ್ತು ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಸುಮಿತ್ ಕುಮಾರ್, ವಲಯ ಮೇಲ್ವಿಚಾರಕಿ ಲತಾ ಅಮೀನ್, ಸಾವಯವ ಸ್ಥಳ ಯೋಜನೆ ಅಧ್ಯಕ್ಷ ರಘುನಾಥ ಶೆಟ್ಟಿ, ಮೆನ್ನಬೆಟ್ಟು -ಕಿಲೆಂಜೂರು ಒಕ್ಕೂಟದ ಅಧ್ಯಕ್ಷೆ ನಯನಾ ಶೆಟ್ಟಿ, ಕೃಷಿ ಸಹಾಯಕ ದಿವಾಕರ ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಿಲ್ಪಾಡಿ ಬಂಡಸಾಲೆ ಪ್ರದೇಶದಲ್ಲಿ ಕೃತಕ ನೆರೆ

Bhagyavan Sanil ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡಸಾಲೆ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 48 ಲಕ್ಷರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಿಂಡಿ ಆಣೆಕಟ್ಟು...

Close