ಐಕಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಯೋಮೆಟ್ರಿಕ್ ನೋಂದಣಿ ಹಾಗೂ ಭಾವಚಿತ್ರ ತೆಗೆಯುವ ಕಾರ್ಯಕ್ರಮ ಐಕಳ ಪಾಂಪೈ ಕಾಲೇಜಿನ ಮಹಿಳಾ ಹಾಸ್ಟೆಲ್ ಪ್ರಾಂಗಣದಲ್ಲಿ ಆರಂಭಗೊಂಡಿತು.
ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೊ ಹಾಗೂ ಐಕಳ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೊಟ್ಯಾನ್ ಅವರು ಭಾವಚಿತ್ರ ತೆಗೆಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಐಕಳ ಪ್ರಭಾರ ಕಾರ್ಯದರ್ಶಿ ಎಮ್.ವಿ. ಮುರನಾಳ, ಗ್ರಾಮ ಕರಣಿಕ ಮಂಜುನಾಥ್ ಪಂಚಾಯಿತಿ ಸದಸ್ಯರಾದ ಜಯಂತ್, ಕಿರಣ್ ರಾಜೇಶ್ ಶೆಟ್ಟಿ, ಸೆವರಿನ್ ಲೋಬೊ, ಗ್ರೇಸಿ, ಸುಶೀಲಾ ಮತ್ತಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ಗ್ರಾಮಸ್ಥರು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ಪಾಸ್ ಪೋರ್ಟ್, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ, ಸಂದ್ಯಾ ಸುರಕ್ಷ, ನಿರಾಶ್ರಿತ ವಿಧವೆಯರ ಪಿಂಚಣಿ ಯೋಜನೆ, ವಿಕಲ ಚೇತನರ ಪಿಂಚಣಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಗಳ ಸಂಖ್ಯೆ, ಎಲ್.ಪಿ.ಜಿ. ಬಳಕೆದಾರರ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಂಬರ್ ದಾಖಲೆಗಳೊಂದಿಗೆ ಹೆಸರು ದಾಖಲಿಸಬಹುದು, ಈ ಕಾರ್ಯಕ್ರಮ ಸೆಪ್ಟೆಂಬರ್ 4ರ ವರೆಗೆ ನಡೆಯುವುದು ಎಂದು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್ ಕೊಟ್ಯಾನ್ ತಿಳಿಸಿದ್ದಾರೆ.

Comments

comments

Leave a Reply

Read previous post:
ಮೊಂತಿ ಹಬ್ಬದ ಪ್ರಾರಂಭ

Jerry Kinnigoli ಕಿನ್ನಿಗೋಳಿ : ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯಲ್ಲಿ ಮೊಂತಿ ಹಬ್ಬದ ಪ್ರಯುಕ್ತ ಒಂಬತ್ತು ದಿನದ ಪ್ರಾರ್ಥನೆ ಇಂದು ಪ್ರ್ರಾರಂಭಗೊಂಡಿತು. ಮಕ್ಕಳು ಮೊಂತಿ ಮಾತೆಗೆ ಹೂವು ಅರ್ಪಿಸಿದರು....

Close