ತಾಳಿಪಾಡಿಯಲ್ಲಿ ಮದ್ಯಪಾನ ನಿಷೇಧ ಸಂಕಲ್ಪ

ಕಿನ್ನಿಗೋಳಿ : ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ (ರಿ) ತಾಳಿಪಾಡಿ ಹಾಗೂ ನಾರಾಯಣಗುರು ಸ್ವಸಹಾಯ ಸಂಘದ ಜಂಟೀ ಸಹಯೋಗದಲ್ಲಿ ಮದ್ಯಪಾನ ನಿಷೇಧ ಸಂಕಲ್ಪ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಮನೆಯಲ್ಲಿ ಆಚರಿಸುವ ಶುಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮದ್ಯಪಾನ ನಿಷೇಧ ಸಂಕಲ್ಪ ಬಿತ್ತಿಪತ್ರವನ್ನು ಕಡಂಬೋಡಿ ಮಹಾಬಲ ಪೂಜಾರಿ ಬಿಡುಗಡೆಗೊಳಿಸಿದರು.
ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಉದ್ಯಮಿ ಚಂದ್ರಶೇಖರ ಸನಿಲ್, ಮಾಜಿ ಜಿ.ಪಂ. ಸದಸ್ಯ ಪ್ರಮೋದ್ ಕುಮಾರ್, ದೀಪಕ್ ಪಡೀಲ್, ಹರಿ ಎಚ್. ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಭಾಲಕೃಷ್ಣ ಸಾಲ್ಯಾನ್, ನಾರಾಯಣಗುರು ಸ್ವಸಹಾಯ ಸಂಘದ ಅಧ್ಯಕ್ಷ ಭಾಲಕೃಷ್ಣ, ಯುಗಪುರುಷದ ಭುವನಾಭಿರಾಮ ಉಡುಪ. ಉದ್ಯಮಿ ಪಿ. ಸತೀಶ್ ರಾವ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಬಿ. ಸುರೇಶ್, ಸೋಮಶೇಖರ್, ಮತ್ತಿತರರು ಉಪಸ್ಥಿತರಿದ್ದರು.

Comments

comments

Leave a Reply

Read previous post:
ತಾಳಿಪಾಡಿಯಲ್ಲಿ ಗುರುಮಂದಿರದ ಶಿಲಾನ್ಯಾಸ

ಕಿನ್ನಿಗೋಳಿ : ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ (ರಿ) ತಾಳಿಪಾಡಿ ಇದರ ಗುರುಮಂದಿರದ ಶಿಲಾನ್ಯಾಸವನ್ನು ಗುತ್ತಕಾಡು ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ ಅವರ ಪೌರೋಹಿತ್ಯದಲ್ಲಿ, ಕಡಂಬೋಡಿ ಮಹಾಬಲ ಪೂಜಾರಿ...

Close