ಭಾರತ್ ಸ್ಕೌಟ್ಸ್ ,ಗೈಡ್ಸ್ , ಬುಲ್‌ಬುಲ್ ವಿದ್ಯಾರ್ಥಿಗಳಿಗೆ ಪ್ರವೇಶ ಚರಣ

Bhagyavan Sanil

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಎಳವೆಯಲ್ಲಿಯೇ ಶಿಸ್ತು ಮತ್ತು ಉತ್ತಮ ಸಂಸ್ಕಾರ ಮೂಡಿಸಲು ಸ್ಕೌಟ್ ಮತ್ತು ಗೈಡ್ಸ್ ಸಹಕಾರಿಯಾಗಿದೆ. ಎಂದು ಮೂಲ್ಕಿ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಸಂಚಾಲಕರಾದ ಕೆ.ನರಸಿಂಹ ಪೈ ಹೇಳಿದರು. ಮೂಲ್ಕಿ ಕಾರ್ನಾಡು ಸಿ.ಎಸ್.ಐ ಶಾಲೆಯಲ್ಲಿ ಮೂಲ್ಕಿ ಸ್ಥಳೀಯ ಸಂಸ್ಥೆಯ ಪ್ರಯೋಜಕತ್ವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಬ್ಸ್ ಮತ್ತು ಬುಲ್‌ಬುಲ್ ವಿದ್ಯಾರ್ಥಿಗಳಿಗೆ ಪ್ರವೇಶ ಚರಣ ಮತ್ತು ಸ್ವರ್ಣ ಗರಿ ಪರೀಕ್ಷಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ರವಿರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ಸಹಾಯಕ ಜಿಲ್ಲಾ ಆಯುಕ್ತ ಸರ್ವೋತ್ತಮ ಅಂಚನ್, ಪರೀಕ್ಷಕರಾದ ಜೆಸಿಂತಾ ಸೋಫಿಯಾ ಮತ್ತು ವಿಮಲಾ ಬಾ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹರಿಶ್ಚಂದ್ರ ನಿರೂಪಿಸಿ ವಂದಿಸಿದರು.

Comments

comments

Leave a Reply

Read previous post:
ರೋಟರಿ ಶತಾಬ್ಧಿ ಭವನದಲ್ಲಿ ರಂಜಾನ್ ಸಂಭ್ರಮಾಚರಣೆ

Bhagyavan Sanil ಮೂಲ್ಕಿ: "ಅನೇಕತೆಯಲ್ಲಿ ಏಕತೆಯನ್ನು ಕಂಡಿರುವ ಭಾರತೀಯರಾದ ನಾವು ರಾಷ್ಟ್ರೀಯ ಹಬ್ಬಗಳಂತೆ ನಮ್ಮ ಧಾರ್ಮಿಕ ಹಬ್ಬಗಳನ್ನು ಸರ್ವಧರ್ಮಿಯರು ಒಟ್ಟಿಗೆ ಆಚರಿಸುವಂತಾದರೆ ಹಬ್ಬದ ಆಚರಣೆಯ ಮೌಲ್ಯ ವರ್ಧನೆಯಾಗುತ್ತz"...

Close