ಕಟೀಲು ಸಿತ್ಲದಲ್ಲಿ ತೋಟಗಳಿಗೆ ಹಾನಿ

ಕಟೀಲು: ವಾರದಿಂದ ಸುರಿಯುತ್ತಿರುವ ಜಡಿ ಮಳೆಗೆ ಕಟೀಲು ಸಿತ್ಲದಲ್ಲಿ ಸುಮಾರು 38 ಲಕ್ಷದಲ್ಲಿ ನಿರ್ಮಾಣಗೊಂಡ ಪರಕಟ್ಟೆ ಕಿಂಡಿ ಅಣೆಕಟ್ಟುವಿನ ಬದಿಯಲ್ಲಿ ರತ್ನಾಕರ ಶೆಟ್ಟಿ ಅವರ ೩ಎಚ್.ಪಿ. ಪಂಪು, ಬಾವಿ ಹಾಗೂ ತೆಂಗಿನ ಮರಗಳು ನಂದಿನಿ ನದಿಯಲ್ಲಿ ನೀರು ಪಾಲಾಗಿವೆ. ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ಕುಸಿಯಲಾರಂಭಿಸಿವೆ.
ನದಿಯ ಇನ್ನೊಂದು ಬದಿಯಾದ ಎಕ್ಕಾರು ಗ್ರಾಮದ ಕುಕ್ಕುಂಡೇಲ್‌ನಲ್ಲಿ ಚಂದ್ರಿಕ ಆನಂದ ಶೆಟ್ಟಿಯವರ ತೋಟದ ತೆಂಗಿನ ಮರಗಳು, ತಡೆಗೋಡೆ ಹಾನಿಯಾಗಿದೆ. ನೀರಿನ ರಭಸಕ್ಕೆ ಹಳೆ ಕಿಂಡಿ ಅಣೆಕಟ್ಟು ಸ್ಲಾಬ್ ಕುಸಿದು ಹೊಸ ಅಣೆಕಟ್ಟಿಗೆ ತಡೆಯನ್ನು ಉಂಟು ಮಾಡಿವೆ. ನೀರಿನ ಒಳ ಹರಿವು ಕೃತಕ ನೆರೆಗೆ ಎಡೆಮಾಡಿಕೊಟ್ಟಿವೆ. ಈ ಪರಿಸರದಲ್ಲಿ ತೋಟ, ಗದ್ದೆಗಳು ನದಿ ಪಾಲಾಗುವ ಸಾಧ್ಯತೆಗಳು ದಟ್ಟವಾಗಿದೆ.
ಪಿ.ಡಿ.ಓ. ಗಣೇಶ್ ಬಡಿಗೇರ, ಜಿ. ಪಂ. ಸದಸ್ಯ ಈಶ್ವರ ಕಟೀಲು, ತಾ. ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ ಅಧ್ಯಕ್ಷೆ ಶೈಲಾ ಶೆಟ್ಟಿ, ಉಪಾಧ್ಯಕ್ಷ ಜನಾರ್ಧನ ಕಿಲೆಂಜೂರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Comments

comments

Leave a Reply

Read previous post:
ಮೆನ್ನಬೆಟ್ಟು ರಾಷ್ಟ್ರೀಯ ಜನಸಂಖ್ಯಾ ನೋಂದಣಿ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗಾಗಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಯೋಮೆಟ್ರಿಕ್ ನೋಂದಣಿ ಹಾಗೂ ಭಾವಚಿತ್ರ ತೆಗೆಯುವ ಕಾರ್ಯಕ್ರಮ ಸೋಮವಾರ ಕಿನ್ನಿಗೋಳಿ ಶ್ರೀ ರಾಮ ಮಂದಿರ...

Close