ಮುಲ್ಕಿ ಶ್ರೀ ನಾರಾಯಣ ಗುರು ಜನ್ಮ ಜಯಂತಿ ವಿದ್ಯಾರ್ಥಿ ವೇತನ

Bhagyavan Sanil

ಮುಲ್ಕಿ: ನಾರಾಯಣ ಗುರುಗಳ ತತ್ವಗಳನ್ನು ಹೇಳುದಕ್ಕಿಂತಲೂ ಪಾಲಿಸಿ ತೋರಿಸುವ ಅಗತ್ಯ ಇಂದಿನ ದಿನದಲ್ಲಿದೆ ಎಂದು ಮುಲ್ಕಿ ಕೆನರಾ ಬ್ಯಾಂಕ್ ಪ್ರಭಂದಕ ದಿನಕರ್.ಬಿ.ಅಮೀನ್ ಹೇಳಿದರು.
ಶುಕ್ರವಾರ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಶ್ರೀ ನಾರಾಯಣ ಗುರುಗಳ ಜನ್ಮ ಜಯಂತಿಯ ಪ್ರಯುಕ್ತ ವಿದ್ಯಾರ್ಥಿ ವೇತನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ ನಾವು ಶ್ರೀಗುರುಗಳ ತತ್ವವನ್ನು ಪಾಲಿಸುವಂತೆ ಮಾಡಿದರೆ ಸ್ವಸ್ಥ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭ ಉನ್ನತ ಶಿಕ್ಷಣ ಸಹಿತ ಸುಮಾರು3.50ಲಕ್ಷರೂ ವೆಚ್ಚದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಗುರು ಜಯಂತಿಯ ಪ್ರಯುಕ್ತ ನದೆಸಿದ ಸ್ಪರ್ದೆಗಳ ಬಹುಮಾನ ವಿತರಿಸಲಾಯಿತು.ಸಮಾಜದ ಸಾಧಕರು ಹಾಗೂ ವಿದ್ಯಾನಿಧಿಗೆ ದೇಣಿಗೆ ನೀಡಿದವರನ್ನು ಸನ್ಮಾನಿಸಲಾಯಿತು.
ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಶ್ರೀ ನಾರಾಯಣ ಗುರುಗಳ ತತ್ವದ ಬಗ್ಗೆ ಉಪನ್ಯಾಸ ನೀಡಿದರು.
ಉದ್ಯಮಿ ವಾಸು ಪೂಜಾರಿ ಚಿತ್ರಾಪು ಮತ್ತು ಫಲಿಮಾರು ಗ್ರಾಮ ಪಂ. ಅಧ್ಯಕ್ಷ ನವೀನ್ ಸುವರ್ಣ ಅತಿಥಿಗಳಾಗಿದ್ದರು. ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಚಾಲಕರಾದ ಎಚ್.ವಿ.ಕೋಟ್ಯಾನ್, ಸಂಘದ ಅಧ್ಯಕ್ಷ ಯದೀಶ್ ಕೊಕ್ಕರಕಲ್, ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಸುನೀತಾ ದಾಮೋದರ್, ಸೇವಾದಳದ ಅಧ್ಯಕ್ಷ ಮೋಹನ್ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಯದೀಶ್ ಕೊಕ್ಕರಕಲ್ ಸ್ವಾಗತಿಸಿದರು. ವಾಮನ ಕೋಟ್ಯಾನ್ ನಿರೂಪಿಸಿದರು. ಗೋಪೀನಾಥ ಪಡಂಗ ವಂದಿಸಿದರು.

Comments

comments

Leave a Reply

Read previous post:
ಮುಲ್ಕಿ ಶ್ರೀ ಗುರು ಜಯಂತಿ

Bhagyavan Sanil ಮುಲ್ಕಿ:  ಶ್ರೀ ಗುರು ಜಯಂತಿಯ ಪ್ರಯುಕ್ತ ಬಪ್ಪನಾಡು ಗ್ರಾಮಸ್ಥರ ಕೂಡುವಿಕೆಯಲ್ಲಿ ನಮಿತಾ ಪ್ರದೀಪ್ ರವರ ಮನೆಯಲ್ಲಿ ಗುರು ಪೂಜೆಯಾಗಿ ಗುರು ಭಾವಚಿತ್ರದ ಮೆರವಣಿಗೆಯು ಮುಲ್ಕಿಬಿಲ್ಲವ ಸಂಘವನ್ನು ತಲುಪಿತು.

Close