ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ

ಕಟೀಲು : ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅಧ್ಯಕ್ಷತೆ ವಹಿಸಿ ” ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿರುವ ಆಸ್ರಣ್ಣರು ಶ್ರೀ ಸಾಮಾನ್ಯರಿಗೂ ಆಸರೆಯ ಅಣ್ಣರಾಗಿದ್ದಾರೆ ಅವರ ಆದರ್ಶ ತತ್ವಗಳನ್ನು ನಾವು ರೂಡಿಸಿಕೊಳ್ಳಬೇಕು. ಸಮಾಜದ ಒಳಿತನ್ನು ನಾವು ಸದಾ ಬಯಸಬೇಕು ಎಂದು ಹೇಳಿದರು.
ಯಕ್ಷ ಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸಂಸ್ಮರಣ ಭಾಷಣ ಮಾಡಿದರು. ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಳಾಯಿಯ ಆಡಳಿತ ಮೊಕ್ತೇಸರ ವೇದಮೂರ್ತಿ ಕೃಷ್ಣ ಹೆಬ್ಬಾರ್ ಅವರನ್ನು ಮೊಕ್ತೇಸರರ ನೆಲೆಯಲ್ಲಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ವೇದಮೂರ್ತಿ ಶ್ರೀನಿವಾಸ್ ಭಟ್ ಅವರನ್ನು ಅರ್ಚಕರ ನೆಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.
ಸಂಸದ ಸಳಿನ್ ಕುಮಾರ್ ಕಟೀಲು, ವಿರೋಧ ಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಮುಂಬಾಯಿ ಹಿರಿಯ ಪೋಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ದ.ಕ. ಜಿ.ಪಂ. ಸದಸ್ಯ ಈಶ್ವರ್ ಕಟೀಲ್, ಶ್ರೀ ಮಧ್ವವಾದಿರಾಜ ಇಂಜಿನಿಯರಿಂಗ್ ಕಾಲೇಜು ಬಂಟಕಲ್ಲು ಪ್ರಾಂಶುಪಾಲ ಡಾ| ಮೋಹನದಾಸ್ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಮರವೂರು ಜಗದೀಶ್ ಶೆಟ್ಟಿ, ಪಟೇಲ್ ವೆಂಕಟೇಶ್ ರಾವ್, ಜಗದೀಶ್ ಅಧಿಕಾರಿ, ದೇವಪ್ರಸಾದ್ ಪುನರೂರು, ಕೇಶವ ಆಂಚನ್ ಮುಂಬೈ, ಕದ್ರಿ ನವನೀತ್ ಶೆಟ್ಟಿ, ಭುವನಾಭಿರಾಮ ಉಡುಪ, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ವಾಗತಿಸಿ, ರಮ್ಯ ಆಸ್ರಣ್ಣ ಕಾರ್ಯಕ್ರಮ ನಿರೂಪಿಸಿದರು,

ದಿ| ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರಧಾನ
ಯಕ್ಷಗಾನ ಕಲಾವಿದ ಶೀನಪ್ಪ ರೈ ಸಂಪಾಜೆ ಅವರನ್ನು ಕದ್ರಿ ಅಭಿಮಾನಿ ಬಳಗದವರಿಂದ ಹಾಗೂ ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ ಕುಮಾರ್ ಕಟೀಲು ಅವರನ್ನು ಸುರೇಶ್ ಭಂಡಾರಿ ಮುಂಬಯಿ ಇವರ ವತಿಯಿಂದ ಸನ್ಮಾನಿಸಲಾಯಿತು.

Comments

comments

Leave a Reply

Read previous post:
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕಟೀಲು ಭೇಟಿ

ಕಟೀಲು : ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಶನಿವಾರ ರಾತ್ರಿ ಕಟೀಲು ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಡನೆ ಮಾತನಾಡಿ ರಾಜ್ಯ ಸರಕಾರ ಸಮಾಜ ಪೂರಕ ಯೋಜನೆಗಳನ್ನು ಕೈಗೊಂಡಿದೆ...

Close