ತುಳು ತಾಳಮದ್ದಲೆ ಸೋಡ್‌ಪಾಡ್ ಸಮಾಪನ

ಕಟೀಲು : ಕುರಲ್ ಇಷ್ಟೆರ್ ಕುಡ್ಲದ ಇಪ್ಪತ್ತನೆಯ ವರ್ಷದ ನೆನಪಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಿಜಯ ಯುವ ಸಂಗಮ (ರಿ) ಎಕ್ಕಾರು ಇವರ ಸಹಯೋಗದಿಂದ ಏಳು ದಿನದ ತುಳು ತಾಳಮದ್ದಲೆ ಸೋಡ್‌ಪಾಡ್ ಮತ್ತು ಮಕ್ಕಳಿಗೆ ತುಳು ಭಾವಗಾಯನದ ವಿಶೇಷ ಸ್ಪರ್ಧೆಯು ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಿತು.

ಮಕ್ಕಳ ತುಳು ಭಾವಗಾಯನದ ಸ್ಪರ್ಧೆಯಲ್ಲಿ ರಚನಾ ಭಾರತಮಾತಾ ಶಾಲೆ ಪುನರೂರು ಪ್ರಥಮ, ಕರುಣಾ ಕಟೀಲು ದ್ವಿತೀಯ, ಗೌತಮಿ ಬಡಗ ಎಕ್ಕಾರು ತೃತೀಯ ಸ್ಥಾನ ಗಳಿಸಿದರು.
ತುಳು ತಾಳಮದ್ದಲೆ ಸ್ಪರ್ಧೆಯಲ್ಲಿ ಶ್ರೀ ವೈದ್ಯನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಕಣಂತೂರು ಪ್ರಥಮ, ಯಕ್ಷಮೈತ್ರಿ ಕಟೀಲು ದ್ವಿತೀಯ, ಶ್ರೀ ಗಜಾನನ ಯಕ್ಷ ರಂಗ ಪಡುಬಿದ್ರಿ ತೃತೀಯ ಪ್ರಶಸ್ತಿ ಗಳಿಸಿತು.
ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರ ನೆಲೆಯಲ್ಲಿ ಬಾಸ್ಕರ ನೆಲ್ಲಿತೀರ್ಥ ಮಾತನಾಡಿದರು. ಕಟೀಲು ದೇವಳ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯನಾಥ ಶೆಟ್ಟಿ, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಜ್ಞಾನ ರತ್ನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ದೇವಸ್ಯ ನಿಡ್ಡೋಡಿ, ವಿಜಯ ಯುವ ಸಂಗಮ ಅಧ್ಯಕ್ಷ ಮಧುಸೂದನ್ ಆಚಾರ‍್ಯ ಎಕ್ಕಾರು, ದ.ಕ. ಜಿ. ಪಂ. ಈಶ್ವರ್ ಕಟೀಲು, ಕುರಲ್ ಇಷ್ಟೆರ್ ಕುಡ್ಲ ಅಧ್ಯಕ್ಷ ವಾಮನ ಕರ್ಕೇರ ಕೊಲ್ಲೂರು, ಮತ್ತಿತರರು ಉಪಸ್ಥಿತರಿದ್ದರು. ಚಂದ್ರಹಾಸ ಕಣಂತೂರು ಸ್ವಾಗತಿಸಿದರು, ರಾಜೇಂದ್ರ ಪ್ರಸಾದ್ ವಿ.ಕೆ.ಯಾದವ್ ಸಸಿ ಹಿತ್ಲು ಪ್ರಸ್ತಾಪಿಸಿದರು, ರಾಜೇಂದ್ರ ಪ್ರಸಾದ್ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ

ಕಟೀಲು : ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅಧ್ಯಕ್ಷತೆ ವಹಿಸಿ "...

Close