ತಾಲೂಕು ಮಟ್ಟದ ಶಾಲಾ ಕರಾಟೆ ಪಂದ್ಯಾಟ

ಕಿನ್ನಿಗೋಳಿ : ದ.ಕ ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ಹಾಗೂ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ ಕಿನ್ನಿಗೋಳಿ ಇವರ ಸಹಯೋಗದಲ್ಲಿ ತಾಲೂಕು ಮಟ್ಟದ 2012-13ರ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕರಾಟೆ ಪಂದ್ಯಾಟ ಶನಿವಾರ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶಾಸಕರಾದ ಅಭಯಚಂದ್ರ ಜೈನ್ ಉದ್ಘಾಟಿಸಿ ಮಕ್ಕಳ ಬೆಳವಣಿಗೆಗೆ ಪಠ್ಯ ಶಿಕ್ಷಣ ಮಾತ್ರ ಮುಖ್ಯವಲ್ಲ ಪಾಠ್ಯೇತರ ಚಟುವಟಿಕೆಗಳು ಕೂಡಾ ಮುಖ್ಯ. ಹೆತ್ತವರು ತಮ್ಮ ಮಕ್ಕಳಿನ್ನು ಪ್ರೋತ್ಸಾಹಿಸಿ ಮನೋಸ್ಥೆರ್ಯವನ್ನು ಹೆಚ್ಚಿಸುವಂತೆ ಮಾಡಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ ಅಧ್ಯಕ್ಷತೆ ವಹಿಸಿದ್ದು, ದ.ಕ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ. ಈಶ್ವರ ಕಟೀಲು, ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ ಅಧ್ಯಕ್ಷೆ ಶೈಲಾ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಕ ಎನ್. ಎಸ್. ಅಂಗಡಿ, ಪದ್ಮನೂರು ಕ್ಲಸ್ಟರ್ ಸಿ.ಆರ್.ಪಿ., ಜಗದೀಶ ನಾವಡ, ರೋಟರಿ ಶಾಲಾ ಕಾರ್ಯದರ್ಶಿ ಪಿ.ಸತೀಶ್ ರಾವ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ, ಕರಾಟೆ ಶಿಕ್ಷಕ ಮೋರ್ಗನ್ ವಿಲಿಯಂ, ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗಿಲ್ಬರ್ಟ್ ಡಿ,ಸೋಜ ಸ್ವಾಗತಿಸಿದರು, ಜೆಸಿಂತಾ ಕಾರ್ಡೊಜ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಕಟೀಲು ಸಿತ್ಲದಲ್ಲಿ ತೋಟಗಳಿಗೆ ಹಾನಿ

ಕಟೀಲು: ವಾರದಿಂದ ಸುರಿಯುತ್ತಿರುವ ಜಡಿ ಮಳೆಗೆ ಕಟೀಲು ಸಿತ್ಲದಲ್ಲಿ ಸುಮಾರು 38 ಲಕ್ಷದಲ್ಲಿ ನಿರ್ಮಾಣಗೊಂಡ ಪರಕಟ್ಟೆ ಕಿಂಡಿ ಅಣೆಕಟ್ಟುವಿನ ಬದಿಯಲ್ಲಿ ರತ್ನಾಕರ ಶೆಟ್ಟಿ ಅವರ ೩ಎಚ್.ಪಿ. ಪಂಪು, ಬಾವಿ...

Close