ಕಿನ್ನಿಗೋಳಿ ಅಂತರ್ ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ

ಕಿನ್ನಿಗೋಳಿ:  ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಶಾಲಾ ವಠಾರದಲ್ಲಿ ಅಂತರ್ ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆ ನಡೆಯಿತು.
ಕಿನ್ನಿಗೋಳಿ ರೋಟರಿ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ ಅಧ್ಯಕ್ಷತೆ ವಹಿಸಿದ್ದರು. ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ “ಜೌದ್ಯೋಗಿಕವಾಗಿ ಆಂಗ್ಲಮಾಧ್ಯಮವು ಜೀವನಕ್ಕೆ ಒಂದು ದಾರಿ. ಹಾಗೆಂದು ಕನ್ನಡ ಮಾಧ್ಯಮವನ್ನು ದೂರವಿರಿಸಬಾರದೆಂದು” ಎಂದು ಹೇಳಿದರು. ವಲಯ 3ರ ರೋಟರಿ ಮಾಜಿ ಸಹಾಯಕ ಗವರ್ನರ್ ಡಾ| ಭರತೇಶ್ ಮುಖ್ಯ ಅತಿಥಿಯಾಗಿ ಮಾತನಾಡಿ “ವಿದ್ಯೆಯ ಪ್ರೋತ್ಸಾಹಕ್ಕೆ ಮೂಲಭೂತ ಸೌಕರ್ಯಗಳನ್ನು ಸೇವಾ ಸಂಸ್ಥೆಗಳು ಸೇವೆಯ ಮೂಲಕ ನೀಡಬೇಕು. ಮಕ್ಕಳನ್ನು ಪಠ್ಯಗಳಲ್ಲದೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡುವುದು ಹೆತ್ತವರ ಆದ್ಯ ಕರ್ತವ್ಯ” ಎಂದರು.
ರೋಟರಿ ಶಾಲಾ ಕಾರ್ಯದರ್ಶಿ ಪಿ.ಸತೀಶ್ ರಾವ್, ಉಪಾದ್ಯಕ್ಷ ಸತೀಶ್ಚಂದ್ರ ಹೆಗ್ಡೆ, ಆಡಳಿತ ಸಮಿತಿ ಸದಸ್ಯ ಎಂ.ಬಾಲಕೃಷ್ಣ ಶೆಟ್ಟಿ, ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಗಿಲ್ಬರ್ಟ್ ಡಿ’ಸೋಜ ಸ್ವಾಗತಿಸಿ, ಶಿಕ್ಷಕಿ ಶಾಂತಾ ವಂದಿಸಿದರು. ಶೈಲಜಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಸೂರಿಂಜೆ ಮುಹಿಯುದ್ದೀನ್ ಜಮ್ಮಾ ಮಸೀದಿ ಮಹಾಸಭೆ

ಸೂರಿಂಜೆ: ಜುಮ್ಮಾ ಮಸ್ಜೀದ್ ಜಮಾಅತ್ ಕಮಿಟಿ ಹಾಗೂ ಸಂಸ್ಥೆಗಳ ವಾರ್ಷಿಕ ಮಹಾಸಭೆಯು ಎಮ್.ಜೆ.ಎಮ್ ಹಾಲ್‌ನಲ್ಲಿ, ಕೆ.ಎ.ಅಬ್ದುಲ್ಲಾ ಕಿನ್ನಿಗೋಳಿ ಅಧ್ಯಕ್ಷತೆಯಲ್ಲ್ಲಿ ನಡೆಯಿತು. ಸ್ಥಳಿಯ ಮುದರ್ರಿಸ ಐ.ಎಂ.ಉಮರ್ ಅಹ್ಸನಿಯವರು ದುಃವಾ...

Close