ಕಿರೆಂ ಚರ್ಚ್‌ನಲ್ಲಿ ಕೊಂಕಣಿ ದಿನಾಚರಣೆ

ಕೊಂಕಣಿ ಭಾಷಾ ಮಾನ್ಯತಾ ದಿವಸ ಕಿರೆಂ ಚರ್ಚ್‌ನ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಿರೆಂ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೋ ಅಧ್ಯಕ್ಷತೆ ವಹಿಸಿ “ಕೊಂಕಣಿ ಭಾಷೆ ಪ್ರೀತಿಯ ಸಂಸ್ಕೃತಿಗೆ ಒತ್ತು ಕೊಡುವ ಭಾಷೆ ನಮ್ಮ ಸಮುದಾಯ ಜನರು ಪ್ರೀತಿ, ಸಹ ಬಾಳ್ವೆಯ ಜೀವನ ನಡೆಸಿ ಮುಂದಿನ ಯುವ ಪೀಳಿಗೆಗೆ ದಾರಿಯಾಗಬೇಕು. ಎಂದು ಮಾತನಾಡಿದರು. ದಾಯ್ಜಿವಲ್ಡ್ ವಾರಪತ್ರಿಕೆಯ ಸಂಪಾದಕ ಸ್ಡೀಫನ್ ಹೆರಾಲ್ಡ್ ಮಸ್ಕರೇನಸ್ ಅತಿಥಿಯಾಗಿ ಭಾಗವಹಿಸಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಮಾತೃ ಭಾಷೆಯ ಬಗ್ಗೆ ಯುವ ಜರಿಗೆ ತಿಳಿ ಹೇಳಬೇಕು ಎಂದರು.
ಧರ್ಮಕೇಂದ್ರದ ಶಿಕ್ಷಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಥೋಲಿಕ್ ಸಭಾ ಸಂಘಟನೆಯ ಪರವಾಗಿ ಫಾ| ಜೆರೊಮ್ ಡಿ’ಸೋಜಾ ಸನ್ಮಾನಿಸಿದರು.
ಅಂತರ್ ವಲಯ ಹಗ್ಗ-ಜಗ್ಗಾಟ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಐ.ಸಿ.ವೈ.ಎಮ್ ಸಂಘಟನೆಯ ಪರವಾಗಿ ಸ್ಕಾಲರ್ ಶಿಪ್‌ನ್ನು ಚರ್ಚ್ ಉಪಾಧ್ಯಕ್ಷ ರೋಬರ್ಟ್ ರೊಡ್ರಿಗಸ್ ವಿತರಿಸಿದರು. ಚರ್ಚ್‌ನ ಎಲ್ಲಾ ವಾಳೆಗಳು ಕೊಂಕಣಿ ಭಾಷೆಯ ಹಾಡು, ನೃತ್ಯ, ಕೋಲಾಟ, ಪ್ರಹಸನ, ಕಿರು ನಾಟಕ ಮುಂತಾದ ಕಾರ್ಯಕ್ರಮ ನಡೆಸಿಕೊಟ್ಟರು.
ಸಂತಾನ್ ಡಿ’ಸೋಜಾ ಸ್ವಾಗತಿಸಿ, ಬರ್ಟನ್ ಸಿಕ್ವೇರ ವಂದಿಸಿ, ವಿನಯ ಸಲ್ಡಾನ್ಹ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನಿಡ್ಡೋಡಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ನಿಡ್ಡೋಡಿ: ಶ್ರೀ ಬಾಪೂಜಿ ಅನುದಾನಿತ ಹಿ.ಪ್ರಾ.ಶಾಲೆಯ ಎಲ್ಲಾ ಮಕ್ಕಳಿಗೆ ಇತ್ತೀಚೆಗೆ ದೊಡ್ಡಯ್ಯ ಬಂಗೇರರ ಮಾತಾಪಿತೃಗಳಾದ ದಿ|ಶಿವ ಬೆಲ್ಚಡ ಮತ್ತು ದಿ|ಕಲ್ಯಾಣಿ ಇವರ ಸ್ಮರಣಾರ್ಥ ಉಚಿತ ಸಮವಸ್ತ್ರ ವಿತರಣಾ...

Close