ನಿಡ್ಡೋಡಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

ನಿಡ್ಡೋಡಿ: ಶ್ರೀ ಬಾಪೂಜಿ ಅನುದಾನಿತ ಹಿ.ಪ್ರಾ.ಶಾಲೆಯ ಎಲ್ಲಾ ಮಕ್ಕಳಿಗೆ ಇತ್ತೀಚೆಗೆ ದೊಡ್ಡಯ್ಯ ಬಂಗೇರರ ಮಾತಾಪಿತೃಗಳಾದ ದಿ|ಶಿವ ಬೆಲ್ಚಡ ಮತ್ತು ದಿ|ಕಲ್ಯಾಣಿ ಇವರ ಸ್ಮರಣಾರ್ಥ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಶಾಲಾ ಸಂಚಾಲಕಿ ಕಾಮಿನಿ.ಜಿ.ಶೆಟ್ಟಿ ಉದ್ಘಾಟಿಸಿದರು. ದಾನಿಗಳಾದ ದೊಡ್ಡಯ್ಯ ಬಂಗೇರ, ನೀರಜ ಮತ್ತು ಪುತ್ರಿ ದೇವಿಕಾ ಸಮವಸ್ತ್ರ ವಿತರಣೆ ಮಾಡಿದರು.
ಸಂಜೀವ ಪೂಜಾರಿ, ಗೀತಾ ಕೋಟ್ಯಾನ್, ಶೇಕರ ಶೆಟ್ಟಿ, ಸುಧಾಕರ ಬೆಲ್ಚಡ, ಶಾಂಭವಿ.ಎಸ್.ಶೆಟ್ಟಿ, ಸುಮತಿ , ಶಾಲಾ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಮಿತ್ರ.ಆರ್.ಶೆಟ್ಟಿ ಸ್ವಾಗತಿಸಿದರು, ರಾಧಿಕ ವಂದಿಸಿ, ಯಶವಂತಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ತುಳು ತಾಳಮದ್ದಲೆ ಸೋಡ್‌ಪಾಡ್ ಸಮಾಪನ

ಕಟೀಲು : ಕುರಲ್ ಇಷ್ಟೆರ್ ಕುಡ್ಲದ ಇಪ್ಪತ್ತನೆಯ ವರ್ಷದ ನೆನಪಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ವಿಜಯ ಯುವ ಸಂಗಮ (ರಿ) ಎಕ್ಕಾರು ಇವರ ಸಹಯೋಗದಿಂದ ಏಳು ದಿನದ...

Close