ಮೂಲ್ಕಿ ಶಾಖೆಯ 56ನೇ ವಿಮಾ ಸಪ್ತಾಹ ಉದ್ಘಾಟಣೆ

Bhagyavan Sanil

ಮೂಲ್ಕಿ: ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲಿ ಅತೀಹೆಚ್ಚು ಜನ ಮನ್ನಣೆ ಪಡೆದ ಸಂಸ್ಥೆಯಾಗಿದ್ದು ಸಮಾಜಕ್ಕೆ ಸಹಕಾರಿಯಾಗಿ ಮೂಡಿಬಂದಿದೆ ಎಂದು ಉದ್ಯಮಿ ಕೆ.ಸಿ.ಮಿರಾಂದಾ ಹೇಳಿದರು.
ಅವರು ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ವತಿಯಿಂದ 56ನೇ ವಿಮಾ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಹಿರಿಯ ಶಾಖಾಧಿಕಾರಿ ಇ.ಬಿ.ಲೋಬೊ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉದ್ಯೋಗಿ ರಮಣಿ ಬಂಗೇರಾ, ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಅಭಿವೃದ್ಧಿ ಅಧಿಕಾರಿ ಜೀವನ್ ಕುಮಾರ್  ಉಪಸ್ಥಿತರಿದ್ದರು.
ವಿಮಾ ಸಪ್ತಾಹದ ಅಂಗವಾಗಿ ಮೂಲ್ಕಿ ವಲಯದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕ, ಭಾಷಣ ಸ್ಪರ್ಧೆ ಎರ್ಪಡಿಸಲಾಗಿತ್ತು. ಜಿಜಾನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪ ಆಡಳಿತಾಧಿಕಾರಿ ಪ್ರಕಾಶ್ ವಂದಿಸಿದರು.


Comments

comments

Leave a Reply

Read previous post:
ಪದವಿ ಪೂರ್ವ ಕಾಲೇಜು ವಾಲಿಬಾಲ್ ಕ್ರೀಡಾಕೂಟ

Bhagyavan Sanil ಮುಲ್ಕಿ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಮುಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಯೋಜಕತ್ವದಲ್ಲಿ ಪದವಿ ಪೂರ್ವ ವಿಭಾಗದ...

Close